ಬೆಂಗಳೂರು,ಏ.1: ಇತ್ತೀಚಿನ ಕೇಂದ್ರದ ಬಿಜೆಪಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಗಳು ಅಂದಾದುಂದಿ ತೆರಿಗೆ ಹಾಕಿ, ಬೆಲೆ ಏರಿಸಿ ಜನಸಾಮಾನ್ಯ ಬದುಕಲು ಆಗದ ಪರಿಸ್ಥಿತಿಗೆ ತಳ್ಳಿವೆ ಎಂದು ಆಪ್ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್
ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ,ಈ ಎರಡೂ ಸರ್ಕಾರಗಳ ವಿರುದ್ಧ ಏ.5ರಂದು ರಾಜ್ಯಾದ್ಯಂತ ಬೃಹತ್ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಮುದ್ರಾಂಕ ಶುಲ್ಕ ಆಸ್ತಿ ದರ ಹೆಚ್ಚಳ, ವಾಹನಗಳ ರಿಜಿಸ್ಟ್ರೇಷನ್ ಶುಲ್ಕ, ನಂದಿನಿ ಹಾಲಿನ ಬೆಲೆ, ದೇಶಿಯ ಮದ್ಯದ ದರ ಹೆಚ್ಚಳ ,ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಎಲೆಕ್ಟ್ರಿಕ್ ವಾಹನಗಳ ಮೇಲೆ ಇದ್ದ ತೆರಿಗೆ ವಿನಾಯಿತಿ ರದ್ದು ,ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಶುಲ್ಕ ದುಬಾರಿ, ಕುಡಿಯುವ ನೀರಿನ ಬೆಲೆ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿ ಆಸ್ತಿಗಳ ಬಿ ಖಾತೆ ಹೆಸರಿನಲ್ಲಿ ತೆರಿಗೆ ದರೋಡೆ,ಬಿಬಿಎಂಪಿ ವ್ಯಾಪ್ತಿಯಲ್ಲಿ ದುಪ್ಪಟ್ಟು ಆಸ್ತಿ ತೆರಿಗೆ, ಕೆಪಿಟಿಸಿಎಲ್ ನೂತನ ಮೀಟರ್ ಗಳ ಬೆಲೆ ಲಕ್ಷಾಂತರ ಏರಿಕೆ ,ರೈತರ ಪಂಪ್ಸೆಟ್ ಮೇಲೆ ದುಬಾರಿ ವೆಚ್ಚ, ವಿದ್ಯುತ್ ದರ ಏರಿಕೆ ಹಾಗೂ ಮೆಟ್ರೋ ಬೆಲೆ 100 ಪರ್ಸೆಂಟ್ ಏರಿಕೆಯನ್ನು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ರೀತಿ ಬಿಜೆಪಿಯ ಕೇಂದ್ರ ಸರ್ಕಾರ ಸಹ ಟೋಲ್, ಔಷಧ, ಕಾರು ,ವಿದೇಶಿ ಶಿಕ್ಷಣ,
ವೀ ಸಾ ಶುಲ್ಕ ಸಿ ಏನ್ ಜಿ ಮೇಲಿನ ತೆರಿಗೆ ಹೆಚ್ಚಳ ಮಾಡಿ ಜನಸಾಮಾನ್ಯ ಬದುಕಲು ತತ್ತರಿಸುವಂತಹ ಪರಿಸ್ಥಿತಿಗೆ ಕಳ್ಳಿದೆ ಎಂದು ಆರೋಪಿಸಿದರು.
ಇವುಗಳ ವಿರುದ್ಧ ರಾಜ್ಯದಾದ್ಯಂತ ಮನೆಮನೆಗಳಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಕಾರ್ಯಕರ್ತರು ಬೃಹತ್ ಜಾಗೃತಿ ಅಭಿಯಾನವನ್ನು ಏಪ್ರಿಲ್ 5ರಿಂದ ಬೆಂಗಳೂರಿನಿಂದ ಆರಂಭಿಸಲಾಗುವುದು ಎಂದು ಸೀತಾರಾಮ ಗುಂಡಪ್ಪ ತಿಳಿಸಿದರು.

ಇದೇ ವೇಳೆ ಕೇಂದ್ರ, ರಾಜ್ಯ ಸರ್ಕಾರಗಳ ತೆರಿಗೆ ಭೂತ ಜನ ಸಾಮಾನ್ಯ ಸತ್ತ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ, ಬೆಂಗಳೂರು ನಗರ ಅಧ್ಯಕ್ಷ ಸತೀಶ್ ಕುಮಾರ್, ಹರಿಹರನ್, ಶಶಿಧರ್ ಆರಾಧ್ಯ, ಅನಿಲ್ ನಾಚಪ್ಪ, ಅಯೂಬ್ ಖಾನ್ , ಇರ್ಷಾದ್ ಖಾನ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
