
ಮೈಸೂರು: ಮೈಸೂರಿನ ಸಿದ್ಧಾರ್ಥ ಲೇಔಟ್ ಸ್ಕೇಟಿಂಗ್ ಪಾರ್ಕ್ ಈಗ ಅಕ್ಷರಶಃ ಸ್ವಚ್ಛಗೊಂಡಿದೆ.
ಇಡೀ ಸ್ಕೇಟಿಂಗ್ ಪಾರ್ಕ್ ಡಂಪಿಂಗ್ ಯಾರ್ಡ್ ಆಗಿತ್ತು.ಈ ಬಗ್ಗೆ ವರ್ಶಿಣಿ ನ್ಯೂಸ್ ವೆಬ್ ಪೋರ್ಟಲ್ ಗಮನ ಸೆಳೆದಿತ್ತು.
ಆದರೆ ಮೈಸೂರು ಮಹಾನಗರ ಪಾಲಿಕೆ ಯವರು ಮತ್ತು ಜನಪ್ರತಿನಿಧಿಗಳು ಇದರ ಕಡೆ ಗಮನ ಹರಿಸಲೇ ಇಲ್ಲ.ಇದು ನಿಜಕ್ಕೂ ದುರ್ದೈವದ ಸಂಗತಿ.
ಸ್ಕೇಟಿಂಗ್ ಪಾರ್ಕ್ ಪ್ರತೀ ಮೂಲೆಯಲ್ಲೂ ಕಸದ ರಾಶಿ ತಾಂಡವವಾಡುತಿತ್ತು.
ಇದೀಗ ಇಡೀ ಪಾರ್ಕ್ ನಲ್ಲಿ ಏಳೆಂಟು ಟನ್ ತ್ಯಾಜ್ಯ ಸಂಗ್ರಹಿಸಲಾಯಿತು ಹತ್ತಕ್ಕೂ ಹೆಚ್ಚು ಮೂಟೆಗಳಲ್ಲಿ ಕಸ ತುಂಬಿಸಿ ಸಾಗಿಸಲಾಗಿದೆ.
ಖಾಸಗಿಯವರು ತ್ಯಜ್ಯ ತೆರವುಗೊಳಿಸಿ ಇತರರಿಗೂ ಮಾದರಿಯಾಗಿದ್ದಾರೆ.ನಿಜಕ್ಕೂ ಅವರಿಗೆ ಧನ್ಯವಾದ ಸಲ್ಲಿಸಲೇಬೇಕು.
ನಗರ ಪಾಲಿಕೆಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಮುಖ ಭಾಗಗಳಲ್ಲಿ ನಗರ ಪಾಲಿಕೆ ಆಯುಕ್ತರು ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರ ನೆರವಿನಲ್ಲಿ ಸ್ವಚ್ಛತೆ ಮಾಡಿದರು.
ಏಳೆಂಟು ಟನ್ ಕಸ ಸಂಗ್ರಹಿಸಲಾಯಿತು ಎಂದು ಫೋಟೋ ಪೋಸ್ ಕೊಟ್ಟಿದ್ದೂ ಆಯ್ತು. ಆದರೆ ಸಿದ್ದಾರ್ಥ ನಗರದ ಸ್ಕೇಟಿಂಗ್ ಪಾರ್ಟ್ ನಲ್ಲಿ 10ಕ್ಕೂ ಹೆಚ್ಚು ಟನ್ ಕಸ ತುಂಬಿತ್ತು. ಈ ಪಾರ್ಕ್ ಬಗ್ಗೆ ಯಾವಾಗಲೂ ಮಲತಾಯಿ ಧೋರಣೆಯನ್ನೇ ಅನುಸರಿಸುತ್ತಾ ಬರಲಾಗಿದೆ.
ಅಲ್ಲದೆ ಈ ಪಾರ್ಕ್ ಲಲಿತ ಮಹಲ್ ಮುಖ್ಯರಸ್ತೆ ಸಮೀಪದಲ್ಲೇ ಇದೆ. ಇಲ್ಲಿ ವಿವಿಐಪಿಗಳು ವಾಹನಗಳಲ್ಲಿ ಸಂಚಾರ ಮಾಡುತ್ತಾರೆ ಆದರೂ ಈ ಪಾರ್ಕಿಂಗ್ ಬಗ್ಗೆ ಪಾಲಿಕೆಯ ಅಸಡ್ಡೆ ಜಾಸ್ತಿ. ಈಗಲೂ ಹಸು ಮತ್ತು ಕರುಗಳನ್ನು ಸ್ಕೇಟಿಂಗ್ ಪಾರ್ಕ್ ನಲ್ಲಿ ಹುಲ್ಲು ಮೇಯಲು ಯಾರೊ ಬಿಟ್ಟುಹೋಗಿಬಿಡುತ್ತಾರೆ.
ಸಂಬಂಧಪಟ್ಟ ಯಾರೂ ಈ ಪಾರ್ಕ್ ಕಡೆ ಗಮನ ಹರಿಸುವುದಿಲ್ಲ ಎಂದು ಸಿದ್ದಾರ್ಥ ಲೇಔಟ್ ಜನತೆ ಬೇಸರ ವ್ಯಕ್ತಪಡಿಸುತ್ತಾರೆ.
ಯಾರೋ ಪುಣ್ಯಾತ್ಮರು ಸ್ಕೇಟಿಂಗ್ ಪಾರ್ಕ್ ಪೂರ್ತಿ ಸ್ವಚ್ಛಪಡಿಸಿದ್ದಾರೆ ಇನ್ನಾದರೂ ಹಿರಿಯ ನಾಗರಿಕರು,ಮಹಿಳೆಯರು ವಾಯು ವಿಹಾರ ಮಾಡಲು ವಾಕಿಂಗ್ ಪಾತ್ ಮಾಡಿಕೊಟ್ಟರೆ ಬಹಳ ಒಳ್ಳೆಯದು.
ಈ ಭಾಗದ ಶಾಸಕರಾದ ಟಿ.ಎಸ್.ಶ್ರೀವತ್ಸ ಅವರು ಈ ಬಗ್ಗೆ ಗಮನ ಹರಿಸಿ ವಾಯು ಪಾತ್ ಮಾಡಿಕೊಟ್ಟರೆ ಬಹಳ ಅನುಕೂಲವಾಗುತ್ತದೆ ಎಂದು ಸಿದ್ದಾರ್ಥ ಲೇಔಟ್ ಜನ ಹೇಳಿದ್ದಾರೆ.ಈ ಬಗ್ಗೆ ಶಾಸಕರಾಗಲಿ, ನಗರ ಪಾಲಿಕೆ ಅಧಿಕಾರಿಗಳು ಆಯುಕ್ತರು ಗಮನಹರಿಸಿಯಾರೆ ಕಾದು ನೋಡಬೇಕಿದೆ.
