ಮೈಸೂರು: ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ ಅವರು ನಗರದ ಹಳೆಬಂಡಿಕೇರಿಯಲ್ಲಿರುವ ಪುರಾತನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹರೀಶ್ ಗೌಡ ಅವರು ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ತಿರುಪತಿ ಲಾಡು ಪ್ರಸಾದವನ್ನು ವಿತರಿಸಿ ಶುಭ ಹಾರೈಸಿದರು.
ಶ್ರೀನಿವಾಸನ ಕೃಪೆ ಎಲ್ಲರ ಮೇಲಿರಲಿ, ಭಕ್ತರ ಬದುಕಿನಲ್ಲಿ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ. ಶ್ರಾವಣ ಮಾಸದ ಈ ಪವಿತ್ರ ಸಂದರ್ಭದಲ್ಲಿ ಶ್ರೀ ವೆಂಕಟರಮಣ ಸ್ವಾಮಿಯ ಆಶೀರ್ವಾದದಿಂದ ಸಕಲ ಜನರ ಇಷ್ಟಾರ್ಥಗಳು ನೆರವೇರಲಿ ಎಂದು ಶಾಸಕ ಹರೀಶ್ ಗೌಡ ಹಾರೈಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಹಾಗೂ ಸ್ಥಳೀಯ ಮುಖಂಡರಾದ ನವೀನ್,
ರವಿಚಂದ್ರ, ರಾಮು ,ವಿನುತ ,ರಾಘವ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಟಿ ಎಸ್ ಅರುಣ್, ಸ್ವಾತಿ, ಸಂದೀಪ್, ರಚನಾ, ಅರುಣಾ ,ಮಂಜುಳ ಮಂಗಳ ,ಲೀಲಾ, ಜ್ಞಾನೇಶ್
ಮಾದೇವ್, ಪವನ್, ನಂಜುಂಡಿ
ಜಗದೀಶ್ , ಹಾಗೂ ಇನ್ನಿತರರು ಹಾಜರಿದ್ದರು
