ಮೈಸೂರು: ವಿಧಾನಸಭೆಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅನಿವಾರ್ಯವಾಗಿದ್ದಾರೆ ಅವರು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ಹೇಳಿದ್ದಾರೆ.
ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿರುವುದಕ್ಕೆ ಪ್ರಕಟಣೆ ಮೂಲಕ ಅವರು ಪ್ರತಿಕ್ತಿಯಿಸಿದ್ದಾರೆ.
ರಾಜ್ಯದ ರಾಜಕೀಯದಲ್ಲಿ ಸುದೀರ್ಘ ಅನುಭವ ಹೊಂದಿರುವ ಹಾಗೂ ಸರ್ವ ಜನಾಂಗದ ಜನರ ಏಳಿಗೆಗೆ ಶ್ರಮಿಸುವ ಗುಣವುಳ್ಳ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಅನುಭವದ ನಾಯಕತ್ವ ಅಗತ್ಯವಾಗಿದೆ ಆಡಳಿತ ಅನುಭವ ಹಾಗೂ ಪ್ರಮುಖ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸುವ ಸಾಮರ್ಥ್ಯ ಹೊಂದಿರುವ ಸಿದ್ದು, ಸದನದಲ್ಲಿ ಇರಬೇಕು, ಆಡಳಿತ ಮತ್ತು ಪ್ರತಿಪಕ್ಷ ಎರಡಕ್ಕೂ ಗುಣಮಟ್ಟದ ಚರ್ಚೆ ನಡೆಸಲು ನೆರವಾಗುತ್ತದೆ, ರಾಜ್ಯದ ಹಿತ ದೃಷ್ಟಿಯಿಂದ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಸಕ್ರಿಯವಾಗಿ ಮುಂದುವರೆದು ಕಿರಿಯರಿಗೆ ಮಾರ್ಗದರ್ಶನ ಮಾಡಬೇಕು ಎಂದು ಬಸವರಸಜ ಬಸಪ್ಪ ಮನವಿ ಮಾಡಿದ್ದಾರೆ.
