ಮೈಸೂರು: ಮೈಸೂರಿನ ಸಿದ್ಧಾರ್ಥ ನಗರ,ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀರಾಮನವಮಿ ವೈಭವದಿಂದ ಸಂಪನ್ನಗೊಂಡಿತು.
ಶನಿವಾರ ಬೆಳಗಿನಿಂದಲೇ ದೇವಾಲಯದ ಎಲ್ಲಾ ದೇವರುಗಳಿಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಮಧ್ಯಾಹ್ನ ಆನಂದ ಪುರೋಹಿತರ ತಂಡದವರು ಶ್ರೀ ಸೀತಾರಾಮರಿಗೆ ಪಟ್ಟಾಭಿಷೇಕ ಮತ್ತು ಶ್ರೀ ರಾಮತಾರಕ ಹೋಮವನ್ನು ವಿಧಿಬದ್ದವಾಗಿ ನಡೆಸಿಕೊಟ್ಟರು.
ನಂತರ ಶ್ರೀರಾಮರನ್ನ ಸಾಲಂಕೃತ ಮಂಟಪದಲ್ಲಿ ಆಸೀನರಾಗಿಸಿ,ಮಂಗಳ ವಾದ್ಯ ಗಳೊಂದಿಗೆ ದೇವಾಲಯದ ಉದ್ಯಾನವನದ ಸುತ್ತ ಮೆರವಣಿಗೆ ಮಾಡಲಾಯಿತು.ಈ ವೇಳೆ ಶ್ರೀದೇವಿ ಭಜನಾ ಮಂಡಳಿಯವರು ಭಜನೆ,ಕೋಲಾಟ ಮಾಡುತ್ತಾ ಸಾಗಿದುದು ವಿಶೇಷವಾಗಿತ್ತು.
ಪಟ್ಟಾಭಿಷೇಕ ಮಾಡಿ, ಪೂರ್ಣಾಹುತಿ ಸಮರ್ಪಿಸಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

