ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಜೂನ್ 23, 24 ಮತ್ತು 25 ರಂದು ಹೊನ್ನಾವರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಮಹಾಸಂಸ್ಥಾನಮ್ ಪೀಠಾಧಿಪತಿ ಶ್ರೀ ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಆರೋಗ್ಯ ರಕ್ಷಣೆಗಾಗಿ ಪ್ರಾರ್ಥನೆ, ಧ್ಯಾನ, ತಪಸ್ಸು ಧಾರ್ಮಿಕ ಚಟುವಟಿಕಗಳು ಬಹಳ ಉಪಯುಕ್ತ. ಹಾಗಾಗಿ ಲೋಕಕಲ್ಯಾಣಾರ್ಥಕ್ಕಾಗಿ ಮಾರುತಿ ಗುರೂಜಿ ಅವರ ನೇತೃತ್ವದಲ್ಲಿ ಪ್ರತಿದಿನ ಬೆಳಗ್ಗೆ 8ಘಂಟೆಗೆ ಮಧ್ಯಾಹ್ನ 12ಘಂಟೆಗೆ ಸಂಜೆ 7ಘಂಟೆಗೆ ತ್ರಿಕಾಲ ಸಂಸ್ಥಾನ ಪೂಜೆ ಆಯೋಜಿಸಲಾಗಿದ್ದು ಭಕ್ತರಿಗೆ ಫಲಮಂತ್ರಾಕ್ಷತೆ ನೀಡುತ್ತಾರೆ ಎಂದು ತಿಳಿಸಿದರು.
ಜೂನ್ 22ರಂದು ಸಂಜೆ 7ಘಂಟೆಗೆ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರಕ್ಕೆ ಆಗಮಿಸುವ ಮಾರುತಿ ಗುರೂಜಿ ಅವರನ್ನ ಮಂಗಳವಾದ್ಯ ನಾದಸ್ವರ ವೇದ ಬಳಗದೊಂದಿಗೆ ಸ್ವಾಗತಿಸಲಾಗುವುದು,
ನಂತರ ಜೂನ್ 23ರಂದು ಮಂಗಳವಾರ ಬೆಳಗ್ಗೆ 11.30ಕ್ಕೆ ಶ್ರೀರಾಮತಾರಕ ಹೋಮ ಪೂರ್ಣಾಹುತಿ ಭಕ್ತರಿಗೆ ಪ್ರಸಾದ ನೀಡಲಾಗುವುದು ಎಂದು ಹೇಳಿದರು.
ಜೂನ್ 24ರಂದು ಬುಧುವಾರ ಬೆಳಗ್ಗೆ 11ಘಂಟೆಗೆ ಸಿಂಧೂರ ಅರ್ಚನೆ ನಡೆಯಲಿದ್ದು ೧೦೮ ದಂಪತಿಗಳಿಂದ ಯಂತ್ರೋದ್ದಾರಕ ಆಂಜನೇಯನಿಗೆ ಕುಂಕುಮಾರ್ಚನೆ ಹಮ್ಮಿಕೊಳ್ಳಲಾಗಿದೆ.
ಪಾದುಕ ಪೂಜೆಗೆ ಮೊ 7676997676 ಸಂಪರ್ಕಿಸಬಹುದು, ನಂತರ ಮಹಿಳಾ ಭಜನಾ ಮಂಡಳಿಯಿಂದ ಹನಮಾನ್ ಚಾಲೀಸ ಪಠಣ ನಡೆಯುತ್ತದೆ,
ಜೂನ್ 25ರಂದು ಗುರುವಾರ ಸಂಜೆ 4ಘಂಟೆಗೆ ಗುರುವಂದನ ಕಾರ್ಯಕ್ರಮ ನಡೆಯಲಿದ್ದು ಮಾರುತಿ ಗುರೂಜಿ ಅವರಿಗೆ ಮೈಸೂರಿನ ಸಂಘ ಸಂಸ್ಥೆಗಳಿಂದ ಗುರುನಮನ ಕಾರ್ಯಕ್ರಮ ಇರಲಿದೆ.
ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ, ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ, ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್, ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಡಿ.ಟಿ ಪ್ರಕಾಶ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಾಹ್ಮಣ ಸಂಘದ ಉಪಾಧ್ಯಕ್ಷರಾದ ಡಾ.ಲಕ್ಷ್ಮಿ ದೇವಿ, ಮನು ವಿ, ಉದ್ಯಮಿ ಪ್ರದೀಪ್ ಗೌಡ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.
