ಮೈಸೂರು: ಹಿಂದು ಸಮಾಜೋತ್ಸವ ರಾಜೇಂದ್ರ ನಗರ ಸಮಿತಿ ವತಿಯಿಂದ ಭಾನುವಾರ 1008 ಗಣಪತಿ ವೃತ್ತ ದಿಂದ ಪ್ರಾರಂಭವಾದ ಶೋಭಾಯಾತ್ರೆ ನಾಗರೀಕರ ಗಮನ ಸೆಳೆಯಿತು.
ಶೋಭಾಯಾತ್ರೆಯಲ್ಲಿ ಮಕ್ಕಳು ಸ್ವಾಂತಂತ್ರ್ಯ ಹೋರಾಟಗಾರರು ಮಹಾ ಪುರುಷರ ವೇಷವನ್ನು ಧರಿಸಿದ್ದರು.
ಈ ಮೆರವಣಿಗೆ ಕೆಪಿಟಿಸಿಎಲ್ ಸಮುದಾಯ ಭವನ ತಲುಪಿತು.
ನಂತರ ನಡೆದ ಕಾರ್ಯಕ್ರಮದಲ್ಲಿ
ಮಾತಾ ಅಮೃತಾ ನಂದಮಯಿ ಮಠ ಬೆಂಗಳೂರು ಶಾಖೆ ಅಧ್ಯಕ್ಷರು
ಆತ್ಮನಿರತಾಮೃತ ಚೈತನ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ನಿವೃತ್ತ ಸೈನಿಕರು ಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕರ್ನಾಟಕ ದಕ್ಷಿಣ ಪ್ರಾಂತ ಸಾಮರಸ್ಯ ಸಹ ಸಂಯೋಜಕ್ ರಾಜೇಶ್ ಮಾತನಾಡಿದರು.
ಸಮಿತಿಯ ಕಾರ್ಯದರ್ಶಿ ಸತೀಶ್ ಜೋಗಿ ,ಸದಸ್ಯರಾದ ರೋಹಿತ್ ,ಮಂಜುನಾಥ್ ಸ್ಮಾರ್ಟ್ ,ಸು.ಮುರುಳಿ,ಪ್ರೇಮ್,ಪ್ರಶಾಂತ್ ,ಆನಂದ ಎಸ್ ಎಲ್ ಹಾಗೂ ರಾಜೇಂದ್ರ ನಗರದ ಎಲ್ಲಾ ಮೊಹಲ್ಲಾ ಗಳಿಂದ ಸಾರ್ವಜನಿಕರು, ಸ್ವಸಹಾಯ ಸಂಘಗಳ ಮಹಿಳೆಯರು, ಸಂಘ ಪರಿವಾರದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
