ಮೈಸೂರು: ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ಅಭಿನವ ಶಂಕರ ಆಲಯ ಶಂಕರ ಮಠದ ವತಿಯಿಂದ ಉಪನಯನವಾದ ವಟುಗಳಿಗೆ 7 ವರ್ಷದಿಂದ 16 ವರ್ಷ ಮಕ್ಕಳಿಗಾಗಿ ಏಪ್ರಿಲ್ 23ರಿಂದ ಮೇ 2 ರ ವರೆಗೆ ಉಚಿತ ವಸಂತ ವೇದ ಸಂಸ್ಕೃತ ಸಂಸ್ಕಾರ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಸಂಜೆ 4 ರಿಂದ 7ರವರೆಗೆ ಉಚಿತ ವಸಂತ ವೇದ ಸಂಸ್ಕೃತ ಸಂಸ್ಕಾರ ಶಿಬಿರ ನಡೆಯಲಿದ್ದು ಈ ಶಿಬಿರದಲ್ಲಿ ಸ್ತೋತ್ರಗಳು, ಗೀತಪಾಠ, ಭಜನೆ, ಸಂಧ್ಯಾವಂದನೆ, ಅಗ್ನಿ ಕಾರ್ಯ, ಬಸ್ಮಧಾರಣವಿಧಿ, ಭೋಜನವಿಧಿ, ಉಪಯುಕ್ತ ವೇದ ಸೂಕ್ತ ಮಂತ್ರಗಳನ್ನು ಹೇಳಿಕೊಡಲಾಗುತ್ತದೆ.
ಈ ಉಚಿತ ಶಿಬಿರದ ಪೋಸ್ಟರ್ ಅನ್ನು ಶ್ರೀ ಮಠದ ಧರ್ಮಧಿಕಾರಿಗಳಾದ ರಾಮಚಂದ್ರ, ಮ್ಯಾನೇಜರ್ ಶೇಷಾದ್ರಿ ಭಟ್ ಬಿಡುಗಡೆಗೊಳಿಸಿದರು.
ಹೆಸರು ನೋಂದಾಯಿಉ ಕಡೆಯ ದಿನಾಂಕ ಏಪ್ರಿಲ್ 20.ಹೆಚ್ಚಿನ ಮಾಹಿತಿಗಾಗಿ 08212448213,9448185448
ಸಂಪರ್ಕಿಸಬಹುದು ಎಂದು ಮಠದ ಸ್ವಯಂಸೇವಕರು ತಿಳಿಸಿದ್ದಾರೆ.
