(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ವಾಯು ಮಾಲಿನ್ಯ ದಿನದ ಅಂಗವಾಗಿ ಕ, ರಾ, ರ, ಸಾ, ನಿಗಮ ಕೊಳ್ಳೇಗಾಲ ಘಟಕದ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಸ್ಥೆಯ ವಾಹನಗಳಿಗೆ ಹೊಗೆ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ವಿವಿಧ ಬಸ್ ಘಟಕಗಳಿಂದ ಕೊಳ್ಳೇಗಾಲ ಮಾರ್ಗದ ಮೂಲಕ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ
ಸಂಸ್ಥೆಯ ಬಸ್ ಗಳು ಸೇರಿದಂತೆ ಸುಮಾರು 120 ಬಸ್ ಗಳಿಗೆ ಹೊಗೆ ತಪಾಸಣೆ ಮಾಡಲಾಯಿತು.
ತಪಾಸಣೆ ವೇಳೆ 10 ಬಸ್ ಗಳ ಇಂಜಿನ್ ಗಳಲ್ಲಿ ಅಧಿಕ ಹೊಗೆ ಕಂಡು ಬಂದ ಕಾರಣ ಕೊಳ್ಳೇಗಾಲ ಘಟಕದ ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲೇ ದುರಸ್ಥಿ ಪಡಿಸಿ,ಸಂಬಂಧ ಪಟ್ಟ ಘಟಕಾಧಿಕಾರಿಗಳಿಗೆ ಮಾಹಿತಿ ನೀಡಿ ಈ ಬಸ್ ಗಳು ಸಂಚಾರಿಸಲು ಯೋಗ್ಯವಿಲ್ಲ ಎಂದು ಮನದಟ್ಟು ಮಾಡಿದರು.
ತಪಾಸಣೆ ವೇಳೆ ಪಟ್ಟಣ ಠಾಣೆಯ ಅಪರಾಧ ವಿಭಾಗದ ಆರಕ್ಷಕ ಉಪ ನಿರೀಕ್ಷಕರಾದ ಉಮಾವತಿ ಹಾಜರಿದ್ದು, ಸಂಸ್ಥೆ ವತಿಯಿಂದ ನಡೆಸುತ್ತಿರುವ ಹೋಗೆ ತಪಾಸಣೆ ಕಾರ್ಯಕ್ರಮವನ್ನು ಶ್ಲಾಘಸಿದರು.
ಈ ಸಂಧರ್ಭದಲ್ಲಿ ಘಟಕ ವ್ಯವಸ್ತಾಪಕ ಭೋಗನಾಯಕ್, ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೇದೆಗಳಾದ ಶಂಕರ್, ಸಿದ್ದಪ್ಪ, ರೇವಣ್ಣ, ಬಸವರಾಜ್ (ಕ್ರೈಮ್ ), ನಿಲ್ದಾಣದ ಉಸ್ತುವಾರಿಗಳಾದ, ಚರಣ್, ಚಾಲಕ ಭೋಧಕರಾದ ಕನಕರಾಜು, ಕುಶಲಕರ್ಮಿ ಪಿ ಚಂದ್ರಶೇಖರ, ತಾಂತ್ರಿಕ ಸಿಬ್ಬಂದಿ ಗಳಾದ ಶ್ರೀಕಾಂತ್, ವಿರೂಪಾಕ್ಷ, ಚಾಲಕ ಮಾದೇವಸ್ವಾಮಿ ಹಾಜರಿದ್ದರು.
