ಮೈಸೂರು: ಸಮೃದ್ಧಿ ಟ್ರಸ್ಟ್ ವತಿಯಿಂದ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಕ್ಯೂವೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉದ್ಯೋಗಿಗಳಿಗಾಗಿ ಉಚಿತ ಆರೋಗ್ಯ ಶಿಬಿರ ಹಾಗೂ ಹಣಕಾಸು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಅನ್ನಪೂರ್ಣ ಆಸ್ಪತ್ರೆಯ ವತಿಯಿಂದ ಉಚಿತ ನೇತ್ರ ತಪಾಸಣೆ, ನ್ಯೂ ಮೆಡ್ ಆಸ್ಪತ್ರೆಯ ವತಿಯಿಂದ ಶ್ವಾಸಕೋಶ ಆರೋಗ್ಯ ತಪಾಸಣೆ ಹಾಗೂ ಶ್ರವಣ ತಜ್ಞೆ ಗಗನಾ ಸಾರಥಕ್ ಅವರಿಂದ ಉಚಿತ ಕಿವಿ ಮತ್ತು ಶ್ರವಣ ಪರೀಕ್ಷೆ ನಡೆಸಲಾಯಿತು.
ಅಲ್ಲದೆ, ಸ್ವಸ್ತಿಕ್ ಫಿನ್ ಸರ್ವ್ ಸಂಸ್ಥೆಯ ಸಂಸ್ಥಾಪಕರಾದ ಮುರಳೀಧರ್ ಅವರು ಉದ್ಯೋಗಿಗಳಿಗೆ ಉಳಿತಾಯ, ಹೂಡಿಕೆ, ಹಣಕಾಸು ಯೋಜನೆ ಹಾಗೂ ಆರ್ಥಿಕ ಭದ್ರತೆಯ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿ ಹಣಕಾಸು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಅನ್ನಪೂರ್ಣ ಆಸ್ಪತ್ರೆ ಹಾಗೂ ನ್ಯೂ ಮೆಡ್ ಆಸ್ಪತ್ರೆಯ ವೈದ್ಯಕೀಯ ತಂಡ, ಕ್ಯೂವೇ ಟೆಕ್ನಾಲಜೀಸ್ ಸಂಸ್ಥೆಯ ಆಡಳಿತಾಧಿಕಾರಿ ವೀಣಾ, ಸಮೃದ್ಧಿ ಟ್ರಸ್ಟ್ ಸಂಸ್ಥಾಪಕರಾದ ಸಹನಾ ಗೌಡ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
