ಬೆಂಗಳೂರು: ಗುಬ್ಬಿವಾಣಿ ಟ್ರಸ್ಟ್ ಆಯೋಜನೆಯ ಅವಳ ಹೆಜ್ಜೆ ಕಿರುಚಿತ್ರೋತ್ಸವಕ್ಕೆ ಈ ವರ್ಷವೂ ಅಗಾಧ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹ ಸಿಕ್ಕಿದ್ದು, ಆಸಕ್ತರಿಗಾಗಿ ಮರುಪ್ರದರ್ಶನವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಹಯೋಗದಲ್ಲಿ ಏರ್ಪಡಿಸಲಾಗಿದೆ.
ಈ ಚಿತ್ರಗಳು ಪ್ರತ್ಯೇಕವಾಗಿ ಮಹಿಳೆಯರಿಗೆಂದೇ ಏರ್ಪಡಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ರ ಸ್ಪರ್ಧೆಯಲ್ಲಿ ಆಯ್ಧ 10 ಕನ್ನಡ ಕಿರುಚಿತ್ರಗಳಾಗಿದ್ದು, ವಿಭಿನ್ನ ಅಭಿವ್ಯಕ್ತಿ, ದೃಷ್ಟಿಕೋನಗಳನ್ನು ಬಿಂಬಿಸುತ್ತವೆ.
ಶನಿವಾರ, ಆಗಸ್ಟ್ 1, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು
ಪ್ರವೇಶ ಉಚಿತ ಇರಲಿದೆ.
ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು. https://forms.gle/zDnK2k9Z8sf7J4gz5
ಹೆಚ್ಚಿನ ಮಾಹಿತಿಗಾಗಿ: 88677 47236 ಅಥವಾ avalahejjefilms@gmail.com
ಸಂಪರ್ಕಿಸಿ.
10 ಎ ಎಂ.ಶಾಂತಲಾ ದಾಮ್ಲೆ ಅವರಿಂದ ಪ್ರಾಸ್ತಾವಿಕ ನುಡಿ
10:05 ಎಎಂ- ಅಶ್ವಿನಿ ಅನೀಶ್ ನಿರ್ದೇಶನದ ಸೋರುತಿಹುದು ಮನೆಯ ಮಾಳಿಗಿ.
10:30 ಎಎಂ- ವನು ಪಾಟೀಲ್ ನಿರ್ದೇಶನದ ನಿತ್ಯ.
10:45 ಎಎಂ- ಅನು ಕುಲಕರ್ಣಿ ನಿರ್ದೇಶನದ ಕಾಶಿ ಕೈಲಾಸ’
11:00 ಎಎಂ- ಹರ್ಷಿತ ಜಿ. ಮತ್ತು ರಚನ ಸುವರ್ಣ ನಿರ್ದೇಶನದ ‘ಗೆಜ್ಜೆ’
11:10 ಎಎಂ – ಸುಷ್ಮಾ ಭಾರದ್ವಾಜ್ ನಿರ್ದೇಶನದ ದಾರಿ
11:20 AM – ಸೀಮಾ ಶಶಿಧರ್ ನಿರ್ದೇಶನದ ಎ ಲಿಟ್ಲ್ ಕೇರ್
11:30 ಎಎಂ – ಲಘು ವಿರಾಮ
11:40 ಎಎಂ – ಸುನಯನಾ ಸುರೇಶ್ ನಿರ್ದೇಶನದ ಮೌನ ರಾಗ
12:00 ಪಿಎಂ- ಸೌರಭಾ ರಾವ್ ನಿರ್ದೇಶನದ ಹುಲಿಯಪ್ಪ
12:15 ಕ್ಕೆ- ಶ್ರೇಯ ಸುನಿಲ್ ನಿರ್ದೇಶನದ ಆ ಮಾಡಿ
12:20 ಕ್ಕೆ ಸುಪ್ರಿಯಾ ನಿಪ್ಪಾಣಿ ನಿರ್ದೇಶನದ ರೊಟ್ಟಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
12:45 ಕ್ಕೆ- ನಿರ್ದೇಶಕಿಯರೊಂದಿಗೆ ಪ್ರೇಕ್ಷಕರ ಪ್ರಶ್ನೋತ್ತರ ಇರುತ್ತದೆ ಎಂದು ಚಿತ್ರೋತ್ಸವದ ನಿರ್ದೇಶಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.
