ಮೈಸೂರು: ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ, ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರ ಮತ್ತು ವೃದ್ಧರ ಬೃಂದಾವನ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಯಾದವ್ ಹರೀಶ್ ಅವರ ಅಧ್ಯಕ್ಷತೆಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಹಿರಿಯ ತಾಯಿಯಾದ ಗೌರಮ್ಮ ಅವರು ಮತ್ತು ಅಧ್ಯಕ್ಷರು ಸೇರಿ ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಚೈತ್ರಾ ಅವರು ಸಂವಿಧಾನ ಪೀಠಿಕೆಯನ್ನು ಎಲ್ಲರಿಗೂ ಹೇಳಿಕೊಟ್ಟರು.
ಖಜಾಂಚಿ ಮಂಜುಳಾ, ಸಹಕಾರ್ಯದರ್ಶಿ ಅಶ್ವಿನಿ, ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು, ಹರಣಿ ಸೇರಿದಂತೆ ರಾಜೇಶ್ವರಿ, ಅಮೃತ ಮತ್ತು ಎಲ್ಲಾ ಹಿರಿಯ ತಾಯಂದಿರು ಭಾಗವಹಿಸಿದ್ದರು.
