ಮೈಸೂರು: ವಿದ್ಯೆ ಎಂಬುದು ಜನರ ಬದುಕಿನ ಬಹುದೊಡ್ಡ ಆಸ್ತಿ ಹಾಗಾಗಿ ಎಲ್ಲರೂ ವಿದ್ಯಾವಂತರಾಗಬೇಕು ಎಂದು ಮೈಸೂರು ನಗರ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ ಹೇಳಿದರು.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ,ಗಣರಾಜ್ಯೋತ್ಸವದ ಶುಭಕೋರುವುದರ ಜೊತೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿನವಾದ ಈ ದಿನ ಸ್ನೇಹ ಬಳಗದ ಸೇವಾ ಕಾರ್ಯಕ್ರಮದಲ್ಲಿ ರಾಯಣ್ಣನನ್ನು ಸ್ಮರಿಸುತ್ತಾ ವಿದ್ಯಾರ್ಥಿಗಳಿಗೆ ಡ್ರೈ ಫ್ರೂಟ್ಸ್,ಹಣ್ಣು ಹಂಪಲು ವಿತರಿಸಿದ ವೇಳೆ ಅವರು ಮಾತನಾಡಿದರು.
ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಓದಿನ ಸಮಯದಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ತಂದೆ ತಾಯಿಗೆ ಕೀರ್ತಿ ತರಬೇಕು. ಐತಿಹಾಸಿಕ ದಿನಗಳು ಹಾಗೂ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನವರಿ 26 ಗಣರಾಜ್ಯೋತ್ಸವದ ದಿನ, ಭಾರತದ ಶ್ರೇಷ್ಠ ಸಂವಿಧಾನ ವಿವಿಧ ಭಾಷೆ, ವೇಷಭೂಷಣ ಆಚಾರ ವಿಚಾರಗಳಿಗೆ ಪ್ರತಿಯೊಬ್ಬ ಪ್ರಜೆಯೂ ತಲೆಬಾಗಲೇಬೇಕು ಅಷ್ಟೇ ಅಲ್ಲ ದೇಶವನ್ನು ಮುನ್ನಡೆಸುವ ದಾರಿದೀಪವಾಗಿದೆ. ಗಣರಾಜ್ಯೋತ್ಸವ ನಮ್ಮ ರಾಷ್ಟ್ರೀಯ ಹಬ್ಬ, ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಹೆಮ್ಮೆಯ ದಿನವಾಗಿದೆ ಎಂದು ತಿಳಿಸಿದರು.
ಬ್ರಿಟೀಷರಿಗೆ ನಡುಕ ಹುಟ್ಟಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿನವಾದ ಇಂದು ರಾಯಣ್ಣನ ಹೋರಾಟ, ತ್ಯಾಗ,ಶೌರ್ಯ, ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಕಾಶ್ ಪ್ರಿಯದರ್ಶನ್ ಹೇಳಿದರು.
ಕಾರ್ಯಕ್ರಮದಲ್ಲಿ ಸಿಂಚನಗೌಡ, ವಿದ್ಯಾ, ಇನ್ಸ್ಟಾಗ್ರಾಮ್ ಚಂದನ್, ಬಾಲಾಜಿ, ಹಿರಿಯ ಕ್ರೀಡಾಪಟು ಮಹದೇವ್,ಛಾಯಾ,ಗಾಯಕ ಯಶವಂತ್ ಕುಮಾರ್ , ಕ್ರೀಡಾ ತರಬೇತಿದಾರ ಜಗದೀಶ್,ರಾಜೇಶ್ ಕುಮಾರ್, ಮಹೇಶ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ ,ದತ್ತ ಮತ್ತಿತರರು ಹಾಜರಿದ್ದರು.
