ಗುಜರಾತ್: ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಬೀಗಿದೆ.
ಗುಜರಾತ್ ಟೈಟನ್ಸ್ ವಿರುದ್ಧ ಆರ್ ಸಿ ಬಿ ಭರ್ಜರಿ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡ 8 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು.
ನಂತರ ಬ್ಯಾಟಿಂಗ್ ಪ್ರಾರಂಭಿಸಿದ ಆರ್ ಸಿ ಬಿ ಪ್ರಾರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು.ಆಗ ಫ್ಯಾನ್ಸ್ ಗಳ ಎದೆಯಲ್ಲಿ ನಡುಕ ಹುಟ್ಟಿತ್ತು.
ಇಂದು ಬೆಳಗಿನಿಂದಲೇ ಮೈಸೂರು, ಬೆಂಗಳೂರು ಮತ್ತಿತರೆಡೆ ಆರ್ ಸಿ ಬಿ ಗೆಲುವಿಗೆ ಪ್ರಾರ್ಥಿಸಿ ದೇವಾಲಯಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು.
ಈ ಸಲಾನೂ ಕಪ್ ನಮ್ದೆ ಎಂದು ಘೋಷಣೆಗಳನ್ನು ಕೂಗಿದರು.
ಅಂತೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ.ಆರ್ ಸಿ ಬಿ ಭರ್ಜರಿ ಗೆಲುವು ಸಾಧಿಸಿ ಎರಡನೆ ಬಾರಿ ಐಪಿಎಲ್ ಕಪ್ ಗೆ ಮುತ್ತಿಕ್ಕಿತು.ಈ ಸಲಾನೂ ಕಪ್ ನಮ್ದೆ ಎಂದು ತೋರಿಸಿತು.
ವಿರಾಟ್ ಕೊಹಿಲಿ ಬಾಲ್ ಬೀಸುವ ಮೊದಲೇ ಇಡೀ ದೇಶದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದರು.
ಎಲ್ಲೆಡೆ ಸಂಭ್ರಮಾವರಣೆ,ಪಟಾಕಿಗಳ ಮೊರೆತ ಮೇರೆ ಮೀರಿತ್ತು.
