ಮಾಸ್ಕೋ, ಏ.1: ರಷ್ಯಾದ ಮಿಲಿಟರಿ ಸಾರಿಗೆ ವಿಮಾನ ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದ್ದು,ವಿಮಾನದಲ್ಲಿದ್ದ ಎಲ್ಲಾ 29 ಜನರು ಮೃತಪಟ್ಟಿದ್ದಾರೆ.
ವಿಮಾನವು 2014 ರಲ್ಲಿ ರಷ್ಯಾ ಉಕ್ರೇನ್ನಿಂದ ಸ್ವಾಧೀನಪಡಿಸಿಕೊಂಡ ಕಪ್ಪು ಸಮುದ್ರ ಬಳಿಯ ದ್ವೀಪದಲ್ಲಿ ಪತನಗೊಂಡಿದೆ. ರಕ್ಷಣಾ ಸಚಿವಾಲಯವು 23 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ.
ತಾಂತ್ರಿಕ ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ,ಆದರೆ ರಷ್ಯಾ ರಕ್ಷಣಾ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶೋಧ ಮತ್ತು ರಕ್ಷಣಾ ತಂಡವು An-26 ವಿಮಾನದ ಪತನದ ಸ್ಥಳವನ್ನು ಪತ್ತೆಹಚ್ಚಿದೆ.ಕ್ಷಿಪಣಿಗಳು, ಡ್ರೋನ್ಗಳು ಅಥವಾ ಪಕ್ಷಿ ದಾಳಿಯಂತಹುದೇನೂ ಆಗಿಲ್ಲ, ಅಪಘಾತದ ಬಗ್ಗೆ ತನಿಖೆ ಮಾಡಲು ಮಿಲಿಟರಿ ಆಯೋಗವನ್ನು ಕಳುಹಿಸಲಾಗಿದೆ.
1960 ರ ದಶಕದ ಉತ್ತರಾರ್ಧದಲ್ಲಿ ಪರಿಚಯಿಸಲಾದ ಹಗುರವಾದ ಯುದ್ಧತಂತ್ರದ ಸಾರಿಗೆ ವಿಮಾನವಾದ ಆನ್-26 ಅನ್ನು ಮಿಲಿಟರಿ ಮತ್ತು ನಾಗರಿಕ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ.
ಕ್ರೈಮಿಯಾವು ಕಪ್ಪು ಸಮುದ್ರದ ಉತ್ತರ ಕರಾವಳಿಯಲ್ಲಿರುವ ಪ್ರಮುಖ ಪರ್ಯಾಯ ದ್ವೀಪವಾಗಿದೆ. 2014 ರಲ್ಲಿ ಉಕ್ರೇನ್ನಿಂದ ರಷ್ಯಾ ಈ ಪ್ರದೇಶವನ್ನು ವಶಪಡಿಸಿಕೊಂಡಿತ್ತು,
