ಮೈಸೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ರೈತ ಮೋರ್ಚಾ ವತಿಯಿಂದ ರಾಮಕೃಷ್ಣನಗರದ ಜಿ ಬ್ಲಾಕಿನಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಭ್ರಮಿಸಲಾಯಿತು.
ಈ ವೇಳೆ ಸಾರ್ವಜನಿಕರಿಗೆ ಎಳ್ಳು-ಬೆಲ್ಲ ಹಂಚಿ, ಗೋಪೂಜೆ ಮಾಡಿ, ಗೋಗ್ರಾಸ ನೀಡಿ ರಂಗುರಂಗಾಗಿ ಸಿಂಗಾರಗೊಂಡಿದ್ದ ದನಗಳನ್ನು ಕಿಚ್ಚು ಹಾಯಿಸಲಾಯಿತು. ಗೋಮಾತೆಗೆ ಜೈಕಾರ ಹಾಕುತ್ತಾ ವಂದೇ ಗೋಮಾತರಮ್ ಘೋಷಣೆ ಮೊಳಗಿಸಲಾಯಿತು.
ರಾಮಕೃಷ್ಣನಗರ ಹಾಗೂ ಕುವೆಂಪುನಗರದ ಗೋಪಾಲಕರ ಹಳ್ಳಿಕಾರ್ ಹಾಗೂ ಗೀರ್ ತಳಿಯ ದನಗಳ ಜೊತೆ ಯಡಹಳ್ಳಿ, ಕೇರ್ಗಳ್ಳಿ ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮೀಣ ಭಾಗದಿಂದ ಸಹ ಜೋಡೆತ್ತುಗಳು ಭಾಗವಹಿಸಿ ಜನ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್ ಶ್ರೀವತ್ಸ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ ರಘು, ರುದ್ರಮೂರ್ತಿ, ಹಿರಿಯ ಮುಖಂಡರಾದ ಎಸ್.ಆರ್. ಗೋಪಾಲ ರಾವ್, ಶಿವಕುಮಾರ್, ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ರೈತ ಮೋರ್ಚಾ ನಗರ ಅಧ್ಯಕ್ಷರಾದ ದೇವರಾಜ್, ಮಂಡಲದ ಮೋರ್ಚಾ ಅಧ್ಯಕ್ಷರಾದ ಚಂದ್ರಶೇಖರಸ್ವಾಮಿ, ಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ಈರಪ್ಪ ಕಡಕೊಳ, ಮಂಡಲದ ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಈರೇಗೌಡ, ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎ. ರಾಘವೇಂದ್ರ, ದೇವರಾಜ್, ಪದಾಧಿಕಾರಿಗಳಾದ ಮಂಜುನಾಥ್ ಅರಸ್, ಎನ್. ಶುಭಶ್ರೀ, ಗೋಪಾಲ್ ಅಯ್ಯಂಗಾರ್, ರಾಮಕೃಷ್ಣಪ್ಪ, ಎಸ್ ಟಿ ಮೋರ್ಚಾ ನಗರ ಉಪಾಧ್ಯಕ್ಷರಾದ ಎಸ್ ತ್ಯಾಗರಾಜ್, ಪದಾಧಿಕಾರಿಗಳಾದ ವಿಜಯ ಮಂಜುನಾಥ್, ಶಿವು ಪಟೇಲ್, ನಾಗರಾಜ್ ಜನ್ನು, ಕಾಂತರಾಜ ಅರಸ್, ರಾಚಪ್ಪಾಜಿ, ತುಳಸಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಮಧು ಸೋಮಶೇಖರ್, ರಂಗೇಶ್, ಲಕ್ಷ್ಮಿ ಜಯಶಂಕರ್, ಚಂದನ್ ಗೌಡ, ಸಾಗರ್ ಸಿಂಗ್, ಸಿ.ರಾಘವೇಂದ್ರ, ಅವಿನಾಶ್, ಮಂಜುಳಾ, ಪುಟ್ಟಮ್ಮಣ್ಣಿ, ವಸುಮತಿ, ಮೈಸೂರು ಹನುಮಂತೋತ್ಸವ ಸಮಿತಿಯ ಸಂಜಯ್, ಸಾಮಾಜಿಕ ಕಾರ್ಯಕರ್ತರಾದ ಜಯಸಿಂಹ, ಅಪೂರ್ವ ಸುರೇಶ್, ದಯಾನಂದ್, ಮಿರ್ಲೆ ಫಣಿಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿದ್ದರು.
