ಹುಣಸೂರು: ಎರಡು ವರ್ಷಗಳಿಂದಲೂ ಪಡಿತರ ಅಕ್ಕಿಗಾಗಿ ಬೇರೆ ಊರಿಗೆ ಹೋಗಿ ತರಬೇಕಾದ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿ ದಲಿತ ಕುಟುಂಬಗಳು ಶನಿವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡ ನಾಗರಾಜ ಕೊಳಘಟ್ಟ ನಮ್ಮ ಕೊಳಘಟ್ಟದ ಜನತೆ ಪಡಿತರ ತರಲು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಂತರ ಪುಡ್ ಇನ್ಸ್ಪೆಕ್ಟರ್ ಸುರೇಶ್ ಇಲ್ಲದ ಕಾರಣಅವರೊಂದಿಗೆ ಫೋನಿನಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸವಂತೆ ಮನವಿ ಮಾಡಿದರು.
ಈ ವೇಳಡ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ ಅವರು, ಕೊಳಘಟ್ಟದಲ್ಲಿ ಸುಮಾರು 200 ಮಂದಿ ದಲಿತ ಕುಟುಂಬಗಳು ವಾಸವಾಗಿದ್ದು ಸರಕಾರದಿಂದ ಉಚಿತವಾಗಿ ನೀಡುವ ಪಡಿತರ ಅಕ್ಕಿ ಪಡೆಯಲು ಹರಸಹಾಸ ಪಡಬೇಕಿದೆ ಎಂದು ಹೇಳಿದರು
ಹಲವಾರು ವರ್ಷಗಳಿಂದ ನಮ್ಮಲ್ಲೇ ಪಡಿತರ ವಿತರಿಸಿ ಎಂದು ಮನವಿ ಮಾಡುತ್ತಲೇ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಸ್ವಂದಿಸಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದಾಗಿ ನಮ್ಮೂರಿನ ಜನತೆ ಹೈರಾಣರಾಗಿದ್ದಾರೆ, ಪಡಿತರ ಪಡೆಯಲು, ಹೆಬ್ಬೆಟ್ಟು ನೀಡಲು ಪ್ರತಿ ತಿಂಗಳು. ಮಹಿಳೆಯರು, ವೃದ್ದರು ಕುಪ್ಪೆಗೆ ಹೈವೆ ರಸ್ತೆ ದಾಟಿ ಹೋಗಬೇಕಿದೆ, ಹಲವು ಬಾರಿ ಮಹಿಳೆಯರಿಗೆ ಅಪಘಾತವಾಗಿದೆ ಎಂದು ತಿಳಿಸಿದರು.
ಈಗ ಮತ್ತೆ ಮನೆ ಮಂದಿಯಲ್ಲ ಕೆವೈಸಿ ಮಾಡಿಸ ಬೇಕಿರುವುದರಿಂದ 200 ಕುಟುಂಬಗಳು ಕುಪ್ಪೆಗೆ ಹೋಗಿ ಬರಲು ಸಮಸ್ಯೆಯಾಗಿದೆ, ಇಲ್ಲೆ ಕೆವೈಸಿಗೆ ಅವಕಾಶ ಮಾಡಿಕೊಡಬೇಕು, ಪಡಿತರ ದಿನಸಿ ನಮ್ಮೂರಿನಲ್ಲೇ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು.
ಶೀಘ್ರದಲ್ಲೇ ಸಮಸ್ಯೆ ಬಗ್ಗೆಹರಿಸದಿದ್ದರೆ ಇಡೀ ಊರೆ ಬಂದು ತಾಲ್ಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹವನ್ನು
ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ದೊ.ಯ ಮುತ್ತು,ಚಿಕ್ಕ ಯಜಮಾನ ಕಾಂತರಾಜು,ಕೆ.ಬಿ.ರಾಜು, ಮಾ.ಗ್ರ.ಪಂ ಸದಸ್ಯ ಬಸವಯ್ಯ, ವಾಸು, ರಾಮಯ್ಯ, ರಾಜು, ಚಿಕ್ಕನಂಜಯ್ಯ, ಗೌರಮ್ಮ, ಪುಷ್ಪ, ಸವಿತಾ, ಸುಂದರ್ ರಾಜು, ಕುಮಾರ, ಸಿಂಗಯ್ಯ, ಸಿದ್ದು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
