ಹುಣಸೂರು: ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಹುಣಸೂರು ತಾಲೂಕಿಗೆ ಪಂಪ್ಸೆಟ್ ಸಲಕರಣೆಗಳನ್ನು ನೀಡಲಾಗಿದ್ದು ಸ್ವಾಗತಾರ್ಹ, ಆದರೆ ಸಲಕರಣೆಗಳನ್ನು ಪೂರ್ತಿಯಾಗಿ ನೀಡಿಲ್ಲ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹುಣಸೂರು ತಾಲೂಕಿನಿಂದ ಒಟ್ಟು 123 ಮಂದಿ ಪಂಪ್ಸೆಟ್ ಸಲಕರಣೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇಂದು ಕೇವಲ 18 ಮಂದಿಗೆ ಕೊಡಲಾಗಿದೆ.ಆದರೆ ಅವರು ಕೊಟ್ಟಿರುವ ಲಿಸ್ಟ್ ಅಲ್ಲಿ 24 ಜನರ ಹೆಸರಿದೆ 18 ಜನರನ್ನು ಬಿಟ್ಟು ಉಳಿದವರಿಗೆ ಏಕೆ ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಪಂಪ್ಸೆಟ್ ಮೋಟಾರ್, ಪೈಪ್ ಗಳನ್ನು ನೀಡಿದ್ದಾರೆ ಆದರೆ ಅತ್ಯವಶ್ಯಕವಾಗಿ ಬೇಕಾಗಿರುವ ಕ್ಲ್ಯಾಂಪ್ ಗಳು,ಗ್ರೌಂಡಿಂಗ್ ವಯರ್,ಕಬ್ಬಿಣದ ಪೈಪ್ಗಳನ್ನು ಕೊಡಲೇ ಇಲ್ಲ ಹೀಗೆ ಬೇಕಾಬಿಟ್ಟಿ ನೀಡುವ ಬದಲು ಪಂಪ್ಸೆಟ್ ಸಲಕರಣೆಗಳನ್ನು ಕೊಡದೆ ಇದ್ದರೆ ಚೆನ್ನಾಗಿತ್ತು ಎಂದು ಚೆಲುವರಾಜು ಟೀಕಿಸಿದ್ದಾರೆ.
ಅಷ್ಟೇ ಅಲ್ಲದೆ ಈಗಾಗಲೇ ಪಂಪ್ಸೆಟ್ ಸಲಕರಣೆಗಳನ್ನು ಪಡೆದುಕೊಂಡವರಿಗೆ ಈಗ ಮತ್ತೆ ಮೋಟರ್ ಗಳನ್ನು ನೀಡಿರುವುದು ಸರಿಯಲ್ಲ ಇದಕ್ಕೆ ಅಭಿವೃದ್ಧಿ ನಿಗಮದವರೇ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹುಣಸೂರು ಶಾಸಕರು ಬಂದು ಪಂಪ್ಸೆಟ್ ಮೋಟಾರ್ ಪೈಪ್ ನೀಡುವ ಕಾರ್ಯ ಉದ್ಘಾಟನೆ ಮಾಡಿದ್ದಾರೆ ಅವರು ಹೇಳಿದವರಿಗೆ ಈ ಸಲಕರಣೆಗಳನ್ನು ನೀಡಲಾಗಿದೆ. ಈಗಾಗಲೇ ಪಡೆದವರಿಗೆ ಮತ್ತೆ ಕೊಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಇದಕ್ಕೆ ಶಾಸಕರು ಉತ್ತರಿಸಬೇಕು ಎಂದು ಚೆಲುವರಾಜು ಆಗ್ರಹಿಸಿದ್ದಾರೆ.
