ಮೈಸೂರು: ಮಹಿಳೆಯರ ದೃಢಸಂಕಲ್ಪ,ಶಕ್ತಿಯೇ ಸಮಾಜದ ಬುನಾದಿ ಎಂದು ಖ್ಯಾತ ಜೋತಿಷಿ ಚಂದಾ ಪಾಂಡೆ ಅವರು ತಿಳಿಸಿದರು.
ಮೈಸೂರಿನ ಚಾಮುಂಡಿಪುರಂನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ
ಪಿ ಆರ್ ಕೆ ಫೌಂಡೇಶನ್ ಉದ್ಘಾಟನಾ ಸಮಾರಂಭ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ 2026 ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಇತಿಹಾಸದ ಉದ್ದಕ್ಕೂ ಮಹಿಳೆಯರು
ತಮ್ಮ ಅಪ್ರತಿಮ ದೃಢಸಂಕಲ್ಪ ತ್ಯಾಗ ಮತ್ತು ಶಕ್ತಿಯ ಮೂಲಕ ಸಮಾಜವನ್ನು ರೂಪಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಮಾತನಾಡಿ, ಶಿಕ್ಷಣ ವ್ಯಾಪಾರ ವಿಜ್ಞಾನ ಕಲೆ ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಕೆಲಸಮಾಡುತ್ತಿದ್ದಾರೆ ಮನೆಗೆ ಬೆಳಕಾಗುವ ಹೆಣ್ಣು ದೇಶದ ಅಭಿವೃದ್ಧಿಗೂ ಅಷ್ಟೇ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವಕರಾದ ಡಾ. ಹೇಮಾ ನಂದೀಶ್ ಮಾತನಾಡಿ, ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಸದೃಢರಾಗಬೇಕಾಗಿದೆ ಎಂದು ಕರೆ ನೀಡಿದರು.
ಪ್ರಸ್ತುತ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಸ್ವೀಕರಿಸಿದ ವಿವಿಧ ಕ್ಷೇತ್ರದ ಮಹಿಳೆಯರಾದ
ಚಂದ ಪಾಂಡೆ ಅಮ್ಮಜಿ (ಜ್ಯೋತಿಷ್ಯ ಕ್ಷೇತ್ರ)
ಜ್ಯೋತಿ ಪ್ರಭ (ಜ್ಯೋತಿಷ್ಯ ಕ್ಷೇತ್ರ ),ವಿಜಯಲಕ್ಷ್ಮಿ ಆರ್ ಎನ್ ಅಯ್ಯಂಗಾರ್ (ಸಮಾಜ ಸೇವಾ ಕ್ಷೇತ್ರ)
ಸಿ. ಎಸ್ ನಾಗರತ್ನಮ್ಮ (ಪಿಟೀಲು ವಾದಕಿ)
ಬಿ ಕೆ ವಿಜಯಲಕ್ಷ್ಮಿ (ವೀಣಾ ವಾದನ )ರೇವತಿ ಕೃಷ್ಣಪ್ಪ (ಶಿಕ್ಷಣ ಹಾಗೂ ಸಮಾಜ ಸೇವಕಿ)
ಪೂರ್ಣಿಮಾ ಎಂ (ಸಮಾಜ ಸೇವಕಿ )ದಿವ್ಯ ಎಂ (ಕ್ರೀಡಾಕ್ಷೇತ್ರ) ವಿದುಷಿ ಸಹನಾ ಚೇತನ್ (ನೃತ್ಯ ಕ್ಷೇತ್ರ) ಜಯಲಕ್ಷ್ಮಿ ಎನ್ (ಕರಕುಶಲ ಕ್ಷೇತ್ರ) ಪೂಜಶ್ರೀ (ಸಾಮಾಜಿಕ ಕ್ಷೇತ್ರ )ಕೋಮಲಮನಿ (ವೈದ್ಯಕೀಯ ಕ್ಷೇತ್ರ)
ಶೃತಿ (ಸಂಘಟನಾ ಕ್ಷೇತ್ರ)
ಸಿಂಚನ(ಸಾಮಾಜಿಕ)
ಸೋನಾ (ಮಾಧ್ಯಮ ಕ್ಷೇತ್ರ)
ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪಿಆರ್ ಕೆ ಫೌಂಡೇಶನ್ ಲೋಗೋವನ್ನು ಸಂಸ್ಥೆಯ ಅಧ್ಯಕ್ಷರಾದ ಅಯ್ಯಪ್ಪ ಉದ್ಘಾಟಿಸಿದರು.
ಮಂಜುಳಾ ಸೋಮಣ್ಣ,ಶ್ರುತಿ, ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
