ಹುಣಸೂರು: ಮುಖ್ಯ ಮಂತ್ರಿ
ಡಿ.ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾಸೇವೆ ಆಂದೋಲನವು ಇಂದು ಹುಣಸೂರು ತಾಲೂಕು ಉದ್ದೂರು ಕಾವಲ್ ಗ್ರಾಮಪಂಚಾಯಿತಿ ಆವರಣದಲ್ಲಿ ತಹಸೀಲ್ದಾರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಅಂದೋಲನ ಸಭೆಯಲ್ಲಿ ಗ್ರಾಮಸ್ತರಿಂದ ಸಮಸ್ಯೆಗಳ ಕುರಿತು ಅರ್ಜಿಯನ್ನು ಸ್ವೀಕರಿಸಿ ಸಮಸ್ಯೆ ಆಲಸಿ ಪರಿಹಾರ ಸೂಚಿಸಲಾಯಿತು.
ವಿಧವಾ ವೇತನ ಯೋಜನೆ,
ಅಂಗವಿಕಲರ ಮಾಸಾಶನ ಯೋಜನೆ,
ಸಂಧ್ಯಾ ಸುರಕ್ಷಾ ಯೋಜನೆ,
ಇತರೆ ಪಿಂಚಣಿ ಯೋಜನೆ,
ಪಹಣಿ ತಿದ್ದುಪಡಿ,ಪೋಡಿ,
ಖಾತೆ ಬದಲಾವಣೆ,
ಶಕ್ತಿ ಉಚಿತ ಬಸ್ ಯೋಜನೆ,ವಸತಿ ಯೋಜನೆ,ನಿವೇಶನ/ಮನೆ ಹಂಚಿಕೆ,
ಹೊಸ ಪಡಿತರ ಚೀಟಿ,ಸಾರಿಗೆ,
ರಸ್ತೆ ಅಭಿವೃದ್ಧಿ,ಕುಡಿಯುವ ನೀರು,
ಅನ್ನ ಭಾಗ್ಯ ಯೋಜನೆ,ಗೃಹ ಲಕ್ಷ್ಮೀ ಯೋಜನೆ,ಸರ್ಕಾರಿ ಶಾಲೆಗಳ/ಅಂಗನವಾಡಿ ಅಭಿವೃದ್ಧಿ,ಮಹಾತ್ಮ ಗಾಂಧಿ ನರೇಗಾ ಯೋಜನೆ,ಪೋಲೀಸ್ ಇಲಾಖೆ ಸೇವೆ,
ಖಾಸಗಿ ಉದ್ಯೋಗ,ಕೆರೆ ತುಂಬಿಸುವ ಯೋಜನೆ/ ಬೃಹತ್ ನೀರಾವರಿ
ದೇವಸ್ಥಾನ ಅಭಿವೃದ್ಧಿ/ಜೀರ್ಣೋದ್ಧಾರ,
ಗೃಹ ಜ್ಯೋತಿ ಯೋಜನೆ ಹೀಗೆ ಅನೇಕ ಯೋಜನೆಗಳ ಬಗ್ಗೆ ಅರ್ಜಿ ಸ್ವೀಕರಿಸಿ ತಹಸೀಲ್ದಾರ್ ಅವರು ಅರ್ಜಿದಾರರನ್ನು ಕರೆಸಿ ಸಮಸ್ಯೆ ಆಲಿಸಿ,ಪರಿಹಾರವನ್ನು ಕಂಡುಕೊಳ್ಳಲಾಯಿತು.
ಕೆಲವರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಶೀಘ್ರ ಬಗೆಹರಿಸುವಂತೆ ತಹಸೀಲ್ದಾರ್ ಮಂಜುನಾಥ್ ಸೂಚಿಸಿದರು.
ಉದ್ದೂರು ಕಾವಲ್ ಗ್ರಮಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 150 ರಿಂದ 200 ಮಂದಿ ಆಗಮಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಇದೇ ವೇಳೆ ಹೊನ್ನಿಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಎರಡು ಎಕರೆ ಜಾಗ ಬಿಟ್ಟುಕೊಡುವಂತೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲ್ಲೂಕು ಅಧ್ಯಕ್ಷ ಚೆಲುವರಾಜು ಅವರು ಮನವಿ ಮಾಡಿದರು.
ಇದಕ್ಕೆ ತಹಸೀಲ್ದಾರ್ ಮಂಜುನಾಥ್ ಅವರು ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲೇ ಜಾಗವನ್ನು ಬಿಡಿಸಿಕೊಡುವಂತೆ ಆದೇಶಿಸಿದರು.
ಸಭೆಯಲ್ಲಿ ಮಾತನಾಡಿದ ಮಂಜುನಾಥ್ ಅವರು ಗೌರಿಪುರ ವನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ ಅಲ್ಲಿನ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಮತ್ತು ಜಮೀನುಗಳನ್ನು ನೋಂದಣಿ ಮಾಡಿಸಿ ಇ ಖಾತೆ ಮಾಡಿಸಿಕೊಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಪ್ರಜಾ ಸೇವಾ ಆಂದೋಲನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್, ಇ ಒ ಹೊಂಗಯ್ಯ,ಎಇಇ ಚನ್ನಕೇಶವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬೋರೇಗೌಡ, ಕುಡಿಯುವ ನೀರು ಸರಬರಾಜ ಇಲಾಖೆ ಅಧಿಕಾರಿ ರಾಜೇಂದ್ರ ಕೆ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರಿಗೆ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.
