ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕನ್ನು ಭರ ಪೀಡಿತವೆಂದು ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನು
ಬ್ಲೂ ಇಂಡಿಯಾ ಪಾರ್ಟಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅರಸರು ಸೇನೆ ಆಗ್ರಹಿಸಿವೆ.
ಸಚಿವ ಡಾ ಯತೀಂದ್ರ ಅವರು ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವುದನ್ನು ಕಡೆ ಗಣಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ತಕ್ಷಣ ನಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸುದ್ದಿಗೋಷ್ಢಿಯಲ್ಲಿ ಬ್ಲೂ ಇಂಡಿಯಾ ಪಾರ್ಟಿ ಅಧ್ಯಕ್ಷರಾದ ರಾಜಶೇಖರ್ ದೊಡ್ಡಣ್ಣ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಶಿವರಾಜು ಕೊಣಸೂರು ಮತ್ತು ಬಸವರಾಜು ಮಾಕೋಡು ಅವರುಗಳು ಮಾತನಾಡಿ, ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಪೂರ್ಣಗೊಂಡಿದ್ದು 40 ಕೆರೆಗಳಿಗೆ ಮಾತ್ರ ನೀರು ತುಂಬಿಸಿದ್ದಾರೆ ಇನ್ನುಳಿದ 110 ಕೆರೆಗಳಿಗೂ ತಕ್ಷಣ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಕೆರೆಗೆ ನೀರು ತುಂಬಿಸದಿದ್ದಲ್ಲಿ ತಾಲೂಕಿನದ್ಯಂತ ರೈತರುಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ, ಒಂದು ಕಡೆ ಬರಗಾಲ ಇನ್ನೊಂದು ಕಡೆ ಕೊಳವೆ ಭಾಗಗಳಲ್ಲಿ ನೀರು ಬತ್ತಿ ಹೋಗಿದೆ ಆದ್ದರಿಂದ ಪ್ರತಿಯೊಂದು ಕೆರೆಗೂ ನೀರು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಧ್ಯಕ್ಷರಾದ ರಾಜಶೇಖರ್ ದೊಡ್ಡಣ್ಣ, ಮೌರ್ಯ, ಬಸವರಾಜ್ ಮಕೋಡ್, ಕೊಣಸೂರ್ ಶಿವರಾಜ್, ಸ್ವಾಮಿ ಗೌಡ, ಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.
