ಮೈಸೂರು: ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಅರ್ಜೆಂಟಾಗಿ ರಕ್ತದ ಅವಶ್ಯಕತೆ ಇದ್ದುದರಿಂದ ಮನಗನಹಳ್ಳಿ ಪಂಚಾಯಿತಿಯ ಪಿ ಡಿ ಒ ಸಂತೋಷ್ ಅವರು ರಕ್ತದಾನ ಮಾಡುವ ಮೂಲಕ ಒಬ್ಬ ರೋಗಿಯನ್ನು ಉಳಿಸಿ,ಇತರರಿಗೆ ಮಾದರಿಯಾಗಿದ್ದಾರೆ.
ಸಂತೋಷ್ ರವರಿಗೆ ಒಂದು ಹೆಜ್ಜೆ ರಕ್ತದಾನಿ ಬಳಗದ ವತಿಯಿಂದ ಹಾಗೂ ಚಿರಜೀವ ಸೇವಾ ಟ್ರಸ್ಟ್ ವತಿಯಿಂದ ಅಧ್ಯಕ್ಷ ರಕ್ತದಾನಿ ಮಂಜು ಅಭಿನಂದನೆ ತಿಳಿಸಿದ್ದಾರೆ
ಸಂತೋಷ್ ಅವರಂತೆ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕೆಂದೂ, ರಕ್ತದಾನ ಮಹಾದಾನ ರಕ್ತದಾನ ಶ್ರೇಷ್ಠದಾನ ರಕ್ತದಾನ ಜೀವದಾನ
ಎಂದು ರಕ್ತದಾನಿ ಮಂಜು ಮನವಿ ಮಾಡಿದ್ದಾರೆ.
