ಮೈಸೂರು: ರಾಮಕೃಷ್ಣ ಪರಮಹಂಸರು ಭಾರತದ ಆಧ್ಯಾತ್ಮಿಕ ಚಿಂತನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಸಂತರು ಎಂದು
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು ತಿಳಿಸಿದರು.
ಮಹಾನ್ ಸಂತರು ಹಾಗೂ ಆಧ್ಯಾತ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರ 191ನೇ ಜಯಂತಿ ಅಂಗವಾಗಿ ಅಪೂರ್ವ ಸ್ನೇಹ ಬಳಗದ ವತಿಯಿಂದ ರಾಮಕೃಷ್ಣನಗರದ ವೃತ್ತದಲ್ಲಿನ ಪರಮಹಂಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿದ ವೇಳೆ ಅವರು ಮಾತನಾಡಿದರು.
ಇಸ್ಲಾಂ ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದ ಸಾರವು ಒಂದೇ, ಭಕ್ತಿ, ಆಧ್ಯಾತ್ಮಿಕ
ದಿಂದ ಉನ್ನತಿಯನ್ನು ಸಾಧಿಸಬಹುದು ಎಂದು ಭೋದಿಸಿದ್ದರು. ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಯನ್ನು ಶಿಷ್ಯರನ್ನಾಗಿ ರೂಪಿಸಿ ಜಗತ್ತಿಗೆ ಹಿಂದೂ ಧರ್ಮದ ಮೌಲ್ಯವನ್ನು ಪಸರಿಸಿದರು, ರಾಮಕೃಷ್ಣ ಮಿಷನ್ ಇಂದಿಗೂ ಅವರ ಹಾದಿಯಲ್ಲೇ ನಡೆಯುತ್ತಿದೆ ಅವರ ಕೊಡುಗೆ ಅಪಾರ ಎಂದು ಲಿಂಗರಾಜು ಬಣ್ಣಿಸಿದರು.
ವೆಂಗಿಪುರ ಮಠದ ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ,ಜೋಗಿ ಮಂಜು, ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಮುತ್ತಣ, ಅಪೂರ್ವ ಸುರೇಶ್, ದೂರ ರಾಜಣ್ಣ, ಎಸ್ ತ್ಯಾಗರಾಜ್, ಶಿವು ಪಟೇಲ್, ರಾಘವೇಂದ್ರ, ಎನ್ ಪ್ರತಾಪ್, ಚಂದನ್ ಗೌಡ, ಮಿರ್ಲೆ ಪನೀಶ್, ಧರ್ಮೇಂದ್ರ, ಆನಂದ, ಸುಚೀಂದ್ರ, ಮತ್ತಿತರರು ಹಾಜರಿದ್ದರು.
