ಮೈಸೂರು: ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಇಂದು ದೇಶ ವಿದೇಶಗಳಲ್ಲಿ ಕರ್ನಾಟಕ ರಾಜ್ಯ ಮಾದರಿಯಾಗಿದೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಹೇಳಿದರು
ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ 3 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ
ಮೈಸೂರು ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರುಗಳ ಭಾವಚಿತ್ರ ಹಿಡಿದು ಯಾವುದೇ ವಿಜ್ಞವಿಲ್ಲದೆ ರಾಜ್ಯ ಸರ್ಕಾರ 5 ವರ್ಷ ಯಶಸ್ವಿಯಾಗಿ ಪೂರೈಸಲಿ ಎಂದು ವಿಶೇಷ ಪ್ರಾರ್ಥಿಸಿದರು.
ನಮ್ಮ ರಾಜ್ಯದಲ್ಲಿ ಬಿಜೆಪಿಯವರು ಪಂಚ ಗ್ಯಾರಂಟಿ ಟೀಕಿಸುತ್ತಿದ್ದಾರೆ. ಅವರದೇ ಸರ್ಕಾರಗಳು ಇತರ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿ ಮಾದರಿ ಅನುಸರಿಸುತ್ತಿವೆ,
ಟೀಕೆಗಳು ಸಾಯುತ್ತದೆ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಶಾಶ್ವತವಾಗಿ ಉಳಿಯುತ್ತವೆ ಎಂದು ನಜರ್ಬಾದ್ ನಟರಾಜ್ ಹೇಳಿದರು.
ವಾರ್ಡ್ ನಂಬರ್ 47ರ ರಾಮಪ್ಪ ರಮೇಶ್. ಡಿ.ಕೆ ಅಭಿಮಾನಿ ಜಿ ರಾಘವೇಂದ್ರ, ದಿನೇಶ್, ಸೇವಾದಳ ಮೋಹನ್, ರವಿ, ಕೃಷ್ಣಪ್ಪ (ಗಂಟಯ್ಯ) ಮತ್ತಿತರರು ಹಾಜರಿದ್ದರು.
