ಯಳಂದೂರು: ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಸುವರ್ಣವತಿ ನದಿ ದಡದಲ್ಲಿ ಅಕ್ರಮವಾಗಿ ಆಲದ ಮರಗಳನ್ನು ಕಡಿದು ಸಾಗಾಣಿಕೆ ಮಾಡುತ್ತಿದ್ದನ್ನು ಯಳಂದೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರದ ನಿವಾಸಿ ಸುಲ್ತಾನ್ ಬೇಗ್ ಎಂಬಾತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಅಂಬಳೆ ಗ್ರಾಮದಿಂದ ಹೊಮ್ಮ ಗ್ರಾಮಕ್ಕೆ ತೆರಳುವ ಮಾರ್ಗ ಸುವರ್ಣವತಿ ನದಿ ದಡದ ಸಾರ್ವಜನಿಕ ಸರಕಾರಿ ಜಾಗದಲ್ಲಿ ಬೆಳೆದಿದ್ದ ಆಲದ ಮರಗಳನ್ನು ಕಡಿದು ವಾಹನದಲ್ಲಿ ಸಾಗಾಣಿಕೆ ಮಾಡುತಿದ್ದ.
ಇದರ ಬಗ್ಗೆ ಖಚಿತ ಮಾಹಿತಿ ಆಧರಿಸಿ, ವಲಯ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಆರ್ ಎಫ್ ಒ ಮಂಜುನಾಥ್, ಲಕ್ಷ್ಮಣ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಈ ವೇಳೆ ಅಕ್ರಮವಾಗಿ ಕಡಿದು ಸಾಗಾಣಿಕೆ ಮಾಡುತಿದ್ದ ವಾಹನದಲ್ಲಿ 2.5 ಟನ್ ಅಲದ ಮರದ ತುಂಡುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮರ ಕಡಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೊಳ್ಳೇಗಾಲ ನ್ಯಾಯಾಲಯದ ಅನುಮತಿ ಪಡೆದು ಅ.23 ರಂದು ವಾಹನ ಹಾಗೂ ಮರಗಳನ್ನು ಸ್ವಾದಿನ ಪಡೆದು ಸುಲ್ತಾನ್ ಬೇಗ್ ವಿರುದ್ಧ ಪ್ರಕರಣ ದಾಖಲಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
