ಪಾಕಿಸ್ತಾನ: ಪಾಕಿಸ್ತಾನದ ಜನಪ್ರಿಯ ಟಿಕ್ ಟಾಕ್ ತಾರೆ ಶಂಸು ಬೀಬಿ ಅಲಿಯಾಸ್ ಆಯೆಶಾ ಗಿಲಾನಿ ಅವರನ್ನು ರಸ್ತೆಯ ಮಧ್ಯೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಟ್ಯಾಕ್ಸಿಲಾದ ಜನನಿಬಿಡ ಜಿಟಿ ರಸ್ತೆಯಲ್ಲಿರುವ ಅಟಾಕ್ ಪೆಟ್ರೋಲ್ ಪಂಪ್ ಬಳಿ ಈ ಹತ್ಯೆ ನಡೆದಿದೆ.
ಆಯೇಷಾಗೆ ಇನ್ನೂ 28 ವರ್ಷ.ಟಿಕ್ಟಾಕ್ನಲ್ಲಿ ಸುಮಾರು 1.3 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದರು. ಅವರು ತಮ್ಮ 15 ವರ್ಷದ ಸಹೋದರಿ ಮತ್ತು ಸಹೋದರನೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಸುಮಾರು 30 ರಿಂದ 35 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು ಪೆಟ್ರೋಲ್ ಪಂಪ್ ಬಳಿ ಕಾರಿನ ಮೇಲೆ ಗುಂಡು ಹಾರಿಸಿದರು.ಆಕೆಯ ಸಹೋದರ ನೈಮತುಲ್ಲಾ ಮಾಹಿತಿ ನೀಡಿದ್ದಾರೆ.
ಗುಂಡು ಶಂಸು ಬೀಬಿ ಅವರ ಕುತ್ತಿಗೆಗೆ ತಗುಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಗುಂಡಿನ ದಾಳಿ ನಂತರ, ಕಾರು ನಿಯಂತ್ರಣ ತಪ್ಪಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಂಗಿ ಅಸಿಮಾ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಹೇಳಿದ್ದಾರೆ.
ಶಂಸು ಬೀಬಿ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಟಿಕ್ಟಾಕ್ ವೀಡಿಯೊಗಳನ್ನು ಮಾಡುತ್ತಿದ್ದರು. ಆಕೆಗೆ ಸುಮಾರು 1.3 ಮಿಲಿಯನ್ ಫಾಲೋವರ್ಗಳು ಮತ್ತು ಆಕೆಯ ವೀಡಿಯೊಗಳಿಗೆ 30 ಮಿಲಿಯನ್ಗಿಂತಲೂ ಹೆಚ್ಚು ಲೈಕ್ಗಳು ಬಂದಿದ್ದವು. ಆಕೆಯ ಮರಣದ ನಂತರ, ಕುಟುಂಬವು ಆಕೆಯ ಟಿಕ್ಟಾಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದೆ.
ಆಕೆಯ ಕುಟುಂಬವು ಹಣಕಾಸಿನ ವಿವಾದವೇ ಕೊಲೆಗೆ ಕಾರಣ ಎಂದು ಶಂಕಿಸಿದೆ.
ಪೊಲೀಸರು ಗುರುತಿಸಲಾಗದ ದಾಳಿಕೋರರು ಮತ್ತು ದೂರಿನಲ್ಲಿ ಹೆಸರಿಸಲಾದ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
