(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನಾತ್ಮಕವಾದ ಸಾಮಾಜಿಕ ನ್ಯಾಯದ ಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ ಎಂದು ಶಾಸಕ. ಎ. ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.
ತಾಲ್ಲೂಕಿನ ಮುಳ್ಳೂರು ಹಾಗೂ ಹರಳೆ ಗ್ರಾಮಗಳಲ್ಲಿ ಸುಮಾರು 1.88 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ವೇಳೆ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಿ ಅಭಿವೃದ್ಧಿಗೆ ಸ್ಪಂದಿಸುತ್ತಿದೆ, ಆದ್ದರಿಂದ ನಮ್ಮ ಕೊಳ್ಳೇಗಾಲ ಕ್ಷೇತ್ರಕ್ಕೂ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದ್ದು ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಶಾಸಕರು ತಿಳಿಸಿದರು.
ಮುಳ್ಳೂರಿನಲ್ಲಿ 68 ಲಕ್ಷ ರೂ.ವೆಚ್ಚದಲ್ಲಿ ಮುಖ್ಯ ರಸ್ತೆಯ ಚೆಕ್ ಪೋಸ್ಟ್ ನಿಂದ ಕೆರೆ ರಸ್ತೆ ಡಾಂಬರೀಕರಣ, ಗ್ರಾಮದ ಉಪ್ಪಾರ ಬೀದಿಯಲ್ಲಿ 20 ಲಕ್ಷ, ರೂ.ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಲಿಂಗಾಯತರ ಬೀದಿಯಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ
ಹರಳೆ ಗ್ರಾಮದಿಂದ ಬೆಂಗಳೂರು ಬೈಪಾಸ್ ರಸ್ತೆವರೆಗೆ 50 ಲಕ್ಷ ರೂ.ವೆಚ್ಚದಲ್ಲಿ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿ ಸಿದರು.
ಮುಳ್ಳೂರು ಗ್ರಾಮದ ಈ ಕಾಮಗಾರಿಗಳಿಗೆ ಎರಡು ತಿಂಗಳ ಹಿಂದೆಯೇ ಭೂಮಿ ಪೂಜೆ ನಡೆಸಬೇಕಾಗಿತ್ತು, ಆದರೆ ಅಂತರಾಷ್ಟ್ರೀಯ ಬೌದ್ಧ ಮಹಾಸಮ್ಮೇಳ ಕಾರ್ಯ ಕ್ರಮದಲ್ಲಿ ತೊಡಗಿಸಿ ಕೊಂಡಿದ್ದರಿಂದ ತಡವಾಗಿ ಭೂಮಿ ಪೂಜೆ ನೆರ ವೇರಿಸಲಾಗಿದೆ, ನಾನು ಶಾಸಕ ನಾಗಿ ಆಯ್ಕೆಯಾದ ಬಳಿಕ ನನ್ನ ಮೊದಲ ಅನುದಾನ ವನ್ನು ಈ ಗ್ರಾಮದ ಸ್ಮಶಾನ ನಿರ್ಮಾಣಕ್ಕೆ ನೀಡಿದ್ದೇನೆ,
ಅದೆ ರೀತಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದ 25 ಕೋಟಿ ಅನುದಾನದಲ್ಲಿ ಕ್ಷೇತ್ರದ ಎಲ್ಲಾ ವರ್ಗದ ಎಲ್ಲಾ ಧರ್ಮದ ಎಲ್ಲಾ ಸಮುದಾಯ ಭವನಗಳ ನಿರ್ಮಾಣಕ್ಕೆ ಹಾಗೂ ಭವನಗಳ ಮುಂದುವರಿದ ಕಾಮಗಾರಿಗಳಿಗೆ ನೀಡಿ ದ್ದೇನೆ. ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಎಲ್ಲಾ ಸಮುದಾಯದ ಬೀದಿಗಳ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ಕೊಟ್ಟಿದ್ದೇನೆ ಅದರಂತೆ ಈ ದಿನ ಮುಳ್ಳೂರು ಗ್ರಾಮದಲ್ಲಿ ಸುಮಾರು 1.38 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ 50 ಲಕ್ಷ ರೂ.ವೆಚ್ಚದಲ್ಲಿ ಹರಳೆ ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದೇವೆ ಎಂದು ಎ. ಆರ್. ಕೃಷ್ಣಮೂರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಳ್ಳೂರು ಮಂಜುನಾಥ್, ಕೆ ಆರ್ ಐ ಡಿ ಎಲ್ ಎಇಇ ಚಿಕ್ಕಲಿಂಗಯ್ಯ, ಜಿ ಪಂ ತಾಂತ್ರಿಕ ಉಪವಿಭಾಗಾದ ಎಇಇ ಕುಮಾರ್ ಮತ್ತಿತರರು ಹಾಜರಿದ್ದರು.
