ಸುಡಾನ್: ಸುಡಾನ್ನ ದಕ್ಷಿಣ ದಾರ್ಫರ್ ಪ್ರಾಂತ್ಯದ ರಾಜಧಾನಿ ನ್ಯಾಲಾ ನಗರದ ಜನನಿಬಿಡ ಮಾರುಕಟ್ಟೆಯೊಂದರ ಮೇಲೆ ಸುಡಾನಿನ ಸೇನೆ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ 100ಕ್ಕೂ ಹೆಚ್ಚು ನಾಗರೀಕರು ಮೃತಪಟ್ಟಿದ್ದಾರೆ.
ಸುಡಾನ್ ಮಿಲಿಟರಿ ಅರೆಸೈನಿಕ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸಸ್’ ನಿಯಂತ್ರಣದಲ್ಲಿದ್ದ ಈ ಮಾರುಕಟ್ಟೆಯ ಮೇಲೆ ವಾಯುಮಾರ್ಗದ ಮೂಲಕ ಡ್ರೋನ್ ಬಾಂಬ್ ದಾಳಿ ನಡೆಸಿದೆ.
ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸಾಮಾನ್ಯ ನಾಗರಿಕರು, ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳು ಈ ಭೀಕರ ದಾಳಿಯಲ್ಲಿ ಮೃತಪಟ್ಟಿದ್ದಾರೆ ಮತ್ತು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ತಿಳಿಸಿವೆ.
