(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಬಸ್ ಹಾಗೂ ಮೊಪೈಡ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರರಿಬ್ಬರು ಮೃತಪಟ್ಟ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡರಾಯಪೇಟೆ ಗ್ರಾಮದ ಸಿದ್ದರಾಜು ಅವರ ಮಗ ಸೋಮಣ್ಣ(೭೦) ಮತ್ತು ಬಸವಯ್ಯ ಅವರ ಮಗ ಸಿದ್ದ ರಾಜು(೫೫) ಮೃತಪಟ್ಟ ದುರ್ದೈವಿಗಳು.
ಸರ್ಕಾರಿ ಬಸ್ ಚಾಮರಾಜನಗರದಿಂದ ಮರಳ್ಳಿ ಕಡೆಗೆ ಹೋಗುತ್ತಿದ್ದು ಬೋಗಾಪುರ ಕಡೆಯಿಂದ ಬಂದ ಎಕ್ಸೆಲ್ ಮೊಪೈಡ್ ಸ್ಕೂಟರ್ ಬರುತ್ತಿತ್ತು ಈ ವೇಳೆ ಬೋಗಾಪುರ ಗೇಟ್ ಸಮೀಪ ಅಪಘಾತ ಸಂಭವಿಸಿದೆ.
ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
