ಮೈಸೂರು: ಆಷಾಢ ಮಾಸದ ಹಿನ್ನೆಲೆಯಲ್ಲಿ
ಭಕ್ತರಿಗೆ ತೊಂದರೆಯಾಗದಂತೆ ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಯುವಕರು ಅತ್ಯತ್ತಮ ಕಾರ್ಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಆಷಾಢ ಮಾಸದಲ್ಲಿ ಲಕ್ಷಾಂತರ ಜನರು
ಹರಕೆ ತೀರಿಸಲು ಮೆಟ್ಟಲುಗಳ ಮೂಲಕ ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಾರೆ.
ಹಾಗಾಗಿ ಮೆಟ್ಟಲುಗಳು ಹಾಗೂ ಗೋಪುರಗಳು ಸುಂದರವಾಗಿ ಕಾಣಲು ಶ್ರೀ ಚಾಮುಂಡೇಶ್ವರಿ ಅರಳಿಕಟ್ಟೆ ಸೇವಾ ಟ್ರಸ್ಟ್ ಯುವಕರು ಕಳೆದ ಆರು ವರ್ಷದಿಂದ ಮೆಟ್ಟಲುಗಳಿಗೆ ಹಾಗೂ ಗೋಪುರಗಳಿಗೆ ಸುಣ್ಣ, ಬಣ್ಣ ಬಳಿಯುವ ಮೂಲಕ ಸ್ವಚ್ಛಗೊಳಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಟ್ರಸ್ಟ್
ಅಧ್ಯಕ್ಷರಾದ ಯದುನಂದನ್ ಜಿ ಅವರು ಮಾತನಾಡಿ, ದಯವಿಟ್ಟು ಭಕ್ತಾದಿಗಳು
ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು.
ಮೆಟ್ಟಿಲುಗಳ ಮೇಲೆ ದಯಮಾಡಿ ಅರಿಶಿನ ಕುಂಕುಮ ಹಚ್ಚಬೇಡಿ ಕರ್ಪೂರವನ್ನು ಹಚ್ಚಬೇಡಿ ನೀವು ಮೆಟ್ಟಿಲುಗಳ ಮೂಲಕ ಆಗಮಿಸಲೆಂದೇ ನಾವು ಸ್ವಚ್ಛ ಮಾಡಿದ್ದೇವೆ. ದಯವಿಟ್ಟು ಪರಿಸರ ಉಳಿಸಿ ಬೇರೆಯವರಿಗೆ ಅನುಕೂಲ ಮಾಡಿಕೊಡಿ,ಸ್ವಚ್ಛತೆ ಕಾಪಾಡಿ
ನಿಮಗೆ ಅರಿಶಿನ,ಕುಂಕುಮ
ಹಚ್ಚಬೇಕೆಂದಿದ್ದರೆ ಸೈಡಿನಲ್ಲಿ ಹಚ್ಚಿ ಎಂದು ಅವರು ಪರಿಪಾರಿಯಾಗಿ ಕೇಳಿಕೊಂಡಿದ್ದಾರೆ.
ಟ್ರಸ್ಟ್ ನವರ ಮನವಿಗೆ ಭಕ್ತರು ಸ್ಪಂದಿಸುವ ಅತ್ಯಗತ್ಯವಿದೆ.ಅರಿಶಿನ, ಕುಂಕುಮ ಹಚ್ಚಿದರೆ ನೀರು ಬಿದ್ದು ಮೆಟ್ಟಿಲುಗಳು ಜಾರುತ್ತವೆ.ಇದರಿಂದ ಇತರರಿಗೆ ತೊಂದರೆಯಾಗುತ್ತದೆ ಪರಿಸರ ಕೂಡಾ ಹಾಳಾಗುತ್ತದೆ.
ನಾವು ಸ್ನೇಹಿತರಲ್ಲ ಸೇರಿ
ತಾಯಿ ಚಾಮುಂಡೇಶ್ವರಿ ಅಮ್ಮನ ಸೇವೆ ಮಾಡುವ ಮೂಲಕ ಒಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ಯದುನಂದನ ಹೇಳಿದರು.
ಶಿವ ನಾಯಕ್, ಕೃಷ್ಣ, ವೆಂಕಟೇಶ, ಪಾಪಣ್ಣ, ಧನು, ಮಾದೇಶ್ , ವೀರು, ಗಣೇಶ್, ಪಾಪಣ್ಣ, ಆಟೋ ಸ್ವಾಮಿ, ನಾಗೇಶ್ ಎಂ ಆರ್ ಸುಣ್ಣ,ಬಣ್ಣ ಬಳಿಯುವ ಕಾರ್ಯದಲ್ಲಿ ತೊಡಗಿದ್ದಾರೆ.
