ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಡಾ. ಸಿ. ಶಿವರಾಜ್ ಅವರಿಗೆ ಕನ್ನಡ ಜಾನಪದ ಪರಿಷತ್ ಮತ್ತು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಅಭಿನಂದನಾ ಪೂರ್ವಕ ಸನ್ಮಾನ ಹಮ್ಮಿಕೊಳ್ಳಲಾಯಿತು.
ಈ ವೇಳೆ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಮಾತನಾಡಿ ಪ್ರೊ ಸಿ ಶಿವರಾಜ್ ಅವರ ಸಮರ್ಥ ನಾಯಕತ್ವದಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಉನ್ನತ ಶಿಖರವನ್ನು ತಲುಪಲಿ ಎಂದು ಹಾರೈಸಿದರು.
ಈ ವೇಳೆ ಪಶ್ಚಿಮ ವಲಯ ಅಧ್ಯಕ್ಷರಾದ ರ. ನರಸಿಂಹ ಮೂರ್ತಿ, ವಿ.ವಿ. ಗ್ರಂಥಾಲಯ ಮುಖ್ಯಸ್ಥರಾದ ಡಾ. ಬಿ. ರಘುನಂದನ್, ಒಕ್ಕೂಟದ ಜಿಲ್ಲಾಧ್ಯಕ್ಷರಾದ ಡಾ. ಎನ್. ರವಿಕಾಂತ್ ಹಾಗೂ ಡಾ. ಚಂದ್ರು ಅವರು ಉಪಸ್ಥಿತರಿದ್ದು ನೂತನ ಕುಲಪತಿಗಳಿಗೆ ಶುಭ ಹಾರೈಸಿದರು.
