ಮೈಸೂರು: ಸರ್ಕಾರ ರೈತರಿಗೆ ಭತ್ತ ಬೆಳೆಯಬೇಡಿ ಯಾವುದೇ ಬೆಳೆ ಮಾಡಬೇಡಿ ರಾಗಿ ಜೋಳ ಬೆಳೆಯಿರಿ ಎಂದು ಹೇಳಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಮೈಸೂರು ಜಿಲ್ಲೆ ಮೂಲ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಾತನಾಡಿರುವ ಸಂಘಟನೆಯ
ಮೈಸೂರು ಜಿಲ್ಲಾ ಅಧ್ಯಕ್ಷರಾದ ಬನ್ನೂರು ನಾರಾಯಣ್, ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿರುವಂತೆಯೇ ನಾವು ರಾಗಿ,ಜೋಳ,ಉದ್ದು ಬೆಳೆಯುತ್ತೇವೆ.ಆದರೆ ನಮ್ಮ ಕುಟುಂಬ ಮತ್ತು ಜಾನುವಾರುಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಬರಗಾಲ ಎಂದು ಘೋಷಣೆ ಮಾಡಬೇಕು, ಬರ ಪರಿಹಾರವಾಗಿ ಒಂದು ಎಕರೆಗೆ ಒಂದು ಲಕ್ಷ ರೂಪಾಯಿ ರೈತರಿಗೆ ಪರಿಹಾರ ನೀಡಬೇಕು, ಇದರಿಂದ ರೈತರು ಜೀವನ ನಡೆಸಲು ಅನುಕೂಲವಾಗುತ್ತದೆ
ಎಂದು ಹೇಳಿದರು.
ರೈತರ ಎಲ್ಲಾ ಸಾಲವನ್ನು ರಾಜ್ಯ ಸರ್ಕಾರ ಮನ್ನಾ ಮಾಡಬೇಕು ಇದರಿಂದ ರೈತರ ಬದುಕು ಹಸನಾಗುತ್ತದೆ ಇಲ್ಲವಾದರೆ ರೈತರು ಮತ್ತು ಜಾನುವಾರುಗಳ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬನ್ನೂರು ನಾರಾಯಣ್ ಹೇಳಿದರು.
ಕೂಡಲೇ ಸರ್ಕಾರ ತುರ್ತು ಅಧಿವೇಶನ ಕರೆದು ರೈತರಿಗೆ ಪರಿಹಾರ ಘೋಷಿಸಲು ಕ್ರಮ ಕೈಗೊಳ್ಳಬೇಕು, ರೈತರು,
ಜಾನುವಾರುಗಳು,ಪ್ರಾಣಿಗಳ ರಕ್ಷಣೆ ಮಾಡಲು ಮುಂದಾಗದಿದ್ದರೆ ಸಚಿವರಿಗೆ ಘೇರಾವ್ ಮಾಡುತ್ತೇವೆ ಮುಖ್ಯ ಮಂತ್ರಿಗಳಿಗೆ ಕಪ್ಪುಬಾವುಟ ಪ್ರದರ್ಶಿಸುತ್ತೇವೆ,ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಬನ್ನೂರು ನಾರಾಯಣ್ ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು ಜಿಲ್ಲೆ, ಮೂಲ ಸಂಘಟನೆಯ ಬೆಟ್ಟಹಳ್ಳಿ ಶಿವರಾಮ್, ತುರಗನೂರ ಕೃಷ್ಣೇಗೌಡ ಶ್ರೀನಿವಾಸ್, ವಾಟಾಳ್ ಲೋಕೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.
