ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದ ಬೀಡಾರದಲ್ಲಿ ಬೀಡುಬಿಟ್ಟಿರುವ ಗಜಪಡೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾದ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆನೆಗಳ ಆರೋಗ್ಯ, ಆಹಾರ ಪದ್ಧತಿ, ದೈನಂದಿನ ಆರೈಕೆ ಮತ್ತು ತಾಲೀಮು ಬಗ್ಗೆ ವಿವರಿಸಿದ ಅಧಿಕಾರಿಗಳು, ದಸರಾ ಜಂಬೂಸವಾರಿಗೆ ಆನೆಗಳು ಸದೃಢವಾಗಿರಲು ವಿಶೇಷ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಆನೆಗೆ ನಿಗದಿತ ಪ್ರಮಾಣದಲ್ಲಿ ರಾಗಿ, ಭತ್ತ, ಬೆಲ್ಲ, ತೆಂಗಿನಕಾಯಿ ಸೇರಿದಂತೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ವಿವರಿಸಿದರು
ಈ ಸಂದರ್ಭದಲ್ಲಿ ಸಿಎಫ್ ರವಿಶಂಕರ್, ಡಿಸಿಎಫ್ ಪ್ರಭುಗೌಡ, ಪಶುವೈದ್ಯ ಡಾ. ಆದರ್ಶ್, ಆರ್ಎಫ್ಒ ಯಾಶ್ನಾ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಹಾಜರಿದ್ದರು.
