ಮೈಸೂರು: ಹಿಂದೂ ಧರ್ಮ ಉಳಿಯಬೇಕೆಂದರೆ ಹಬ್ಬಗಳು ಎಲ್ಲಾ ಕಡೆ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ಪಂಚಾಯತ್ ಡೆವಲಪ್ಮೆಂಟ್ ಅಧಿಕಾರಿ ಶೋಭಾ ದಿನೇಶ್ ತಿಳಿಸಿದರು.
ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವರಮಹಾಲಕ್ಷ್ಮಿ ಜೊತೆ ಫೋಟೋ ಸ್ಪರ್ಧೆಯಲ್ಲಿ
ವಿಜೇತರಾದ ಸ್ಪರ್ಧಾಳುಗಳಿಗೆ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ನಡೆಸಿಕೊಂಡು ಬರುವಂತಹ ಅತಿ ದೊಡ್ಡ ಹಬ್ಬ ಶ್ರೀ ವರಮಹಾಲಕ್ಷ್ಮಿ ವ್ರತ,ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಈ ಮೂಲಕ ಹಿಂದೂ ಸನಾತನ ಸಂಸ್ಕೃತಿ ರಕ್ಷಿಸಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು,ಅಲ್ಲದೆ ನಮ್ಮ ಧರ್ಮದ
ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ಶೋಭಾ ದಿನೇಶ್ ಸಲಹೆ ನೀಡಿದರು.
ಆನ್ಲೈನ್ ಮೂಲಕ 250ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ತಮ್ಮ ಮನೆಯಲ್ಲಿ ಅಲಂಕರಿಸಿ ಕೂರಿಸಿದ ಶ್ರೀ ವರಮಹಾಲಕ್ಷ್ಮಿ ಜೊತೆ ಫೋಟೋವನ್ನು ಕಳುಹಿಸಿದ್ದರು.
ಚಾಮುಂಡಿಪುರಂ ನಿವಾಸಿ ಶಾರದಾ ಜಗದೀಶ್, ಅಶೋಕಪುರಂನ ಅನಿತಾ, ಲಕ್ಷ್ಮಿಪುರಂ ಕಾವ್ಯ, ಬೋಗಾದಿ ಪುಷ್ಪ, ದಟ್ಟಗಳ್ಳಿಯ ಮೇಘನಾ, ಅಶೋಕಪುರಂನ ಮಾಲತಿ, ಮಂಡಿ ಮೋಹೂಲ್ಲ ಚೈತ್ರ, ಚಿಕ್ಕಮಂಗಳೂರಿನ ಕವಿತಾ, ಬೆಂಗಳೂರಿನ ಶೋಭಾ, ನಂಜನಗೂಡಿನ ವರಲಕ್ಷ್ಮಿ ಅವರುಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮೂಡ ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ವಿಜಯಲಕ್ಷ್ಮಿ ಅಯ್ಯಂಗಾರ್,
ಎಸ್ ಎನ್ ರಾಜೇಶ್, ನಿರೂಪಕ ಪುರುಷೋತ್ತಮ್ , ರೂಪ ಮತ್ತಿತರರು ಹಾಜರಿದ್ದರು.
