ಮೈಸೂರು: ಮೈಸೂರಿನ ಸರಸ್ವತಿ ಪುರಂ
ಶ್ರೀ ಕೃಷ್ಣದಾಮದಲ್ಲಿ ನಾಳೆ ಕು. ಐಶ್ವರ್ಯ ರಂಗರಾಜನ್ ಅವರಿಂದ ರಾಗ ರಂಜನಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ
ವತಿಯಿಂದ ಉಡುಪಿ ಶ್ರೀ ಕಾಣಿಯೂರು ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ಅಂಗವಾಗಿ ಐಶ್ವರ್ಯ ರಂಗರಾಜನ್ ಅವರಿಂದ ನಾಳೆ ಸಂಜೆ 7 ಗಂಟೆಗೆ ರಾಗ ರಂಜನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಪ್ರಕಟಣೆಯ ಮೂಲಕ ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯ ಸಮಿತಿಯ ಖಜಾಂಚಿಗಳಾದ ಶ್ರೀಕಾಂತ್ ರಾವ್ ತಿಳಿಸಿದ್ದಾರೆ.
