ನೈಜೀರಿಯಾ: ಉತ್ತರ ನೈಜೀರಿಯಾದಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು 30 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಉತ್ತರ ನೈಜೀರಿಯಾದ ಕಾನೋ ರಾಜ್ಯದ ಗೆಜಾವಾ ಪ್ರದೇಶದ ಕ್ವಾನಾರ್ ಬಾರ್ಡೆ ಪಟ್ಟಣದ ಪ್ರಮುಖ ಹೆದ್ದಾರಿಯಲ್ಲಿ ಟ್ರಕ್ ಅಪಘಾತಕ್ಕೀಡಾಗಿದೆ.
ದೊಡ್ಡ ಟ್ರೇಲರ್ ಟ್ರಕ್ ಅತಿ ವೇಗವಾಗಿ ಚಲಿಸಿ ಚಾಲಕನ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಕ್ ಕಾನೋದಿಂದ ಗುಜುಂಗು ಪಟ್ಟಣದ ಕಡೆಗೆ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿತ್ತು.ಟ್ರಕ್ ಉರುಳಿದಾಗ ಕೆಲವು ಪ್ರಯಾಣಿಕರು ಟ್ರಕ್ ಕೆಳಗೆ ಸಿಲುಕಿದ್ದಾರೆ.ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆಯನ್ನು ಹೃದಯವಿದ್ರಾವಕ ಮತ್ತು ಮೃತರು ಹಾಗೂ ಗಾಯಾಳುಗಳ ಕುಟುಂಬಗಳು ಮತ್ತು ರಾಜ್ಯದ ಇಡೀ ಜನರಿಗೆ ದೊಡ್ಡ ನಷ್ಟ ಎಂದು ರಾಜ್ಯಪಾಲ ಅಬ್ಬಾ ಕಬೀರ್ ಯೂಸುಫ್ ತಿಳಿಸಿದ್ದಾರೆ.
