ಮೈಸೂರು: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಯುವಕರ ತಂಡ ಮೋಜು ಮಸ್ತಿ ಮಾಡದೆ ರಸ್ತೆ ಬದಿ ನಿರಾಶ್ರಿತರಿಗೆ ಹೂದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿತು.
ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್
ನಿರಂತರವಾಗಿ 30 ದಿನಗಳಿಂದ ರಸ್ತೆ ಬದಿಯಲ್ಲಿ ಮಲಗಿರುವ ನಿರಾಶ್ರಿತರು ಹಾಗೂ ಅಸಹಾಯಕರಿಗೆ ಹೊದಿಕೆ ವಿತರಣೆ ನೀಡುತ್ತಾ ಬಂದಿದೆ.
ವಿಶೇಷವಾಗಿ ವರ್ಷದ ಕೊನೆಯ ದಿನದಂದು
ಮೋಜು ಮಸ್ತಿ ಮಾಡದೆ ಬಂಡಿಪಾಳ್ಯ ತರಕಾರಿ ಮಾರ್ಕೆಟ್ ಸುತ್ತಮುತ್ತ ಮಲಗಿರುವ ನಿರಾಶ್ರಿತರಿಗೆ ಹಾಗೂ ಲಾರಿ ಕೆಳಗೆ ಜೀವನ ಸಾಗಿಸುತ್ತಿರುವ ನಿರಾಶ್ರಿತರಿಗೆ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ನವರೊಂದಿಗೆ ಯುವಕರ ತಂಡ ಸ್ಥಳಕ್ಕೆ ತೆರಳಿ ಹೊದಿಕೆ ನೀಡಿ ಮಾನವೀಯತೆ ಮೆರೆದರು.
ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮುಳುಗಿ ಮೋಜು ಮಸ್ತಿ ಮಾಡಲು ಸ್ನೇಹಿತರೊಡನೆ ಪ್ರವಾಸಿ ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ ಕೇಕ್ ಕಟ್ ಮಾಡಿ ಹಾಗೂ ಮೈಮರೆತು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುವ ಇಂತಹ ಸಂದರ್ಭದಲ್ಲಿ 50 ಕ್ಕೂ ಹೆಚ್ಚು ನಿರಾಶ್ರಿತರಿಗೆ ಹೊದಿಕೆ ವಿತರಿಸುವ ಮೂಲಕ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್,ಬಿಜೆಪಿ ಮುಖಂಡರಾದ ಜೋಗಿ ಮಂಜು,ಕಾಂಗ್ರೆಸ್ ಮುಖಂಡ ಜಿ ರಾಘವೇಂದ್ರ,ರಂಗಭೂಮಿ ಕಲಾವಿದ ಅಮಿತ್,ನಿರುಪಕ ಅಜಯ್ ಶಾಸ್ತ್ರಿ,ಎಸ್. ಎನ್ ರಾಜೇಶ್,ರಾಕೇಶ್,
ಮಂಜುನಾಥ್,ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.
