ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ಮಹಾಗೌರಿ ಅಮ್ಮನ ಅಲಂಕಾರ ಮಾಡಿ ವಿಶೇಷ ಪೂಜೆ ಮಹಾಮಂಗಳಾರತಿ ನೆರವೇರಿಸಲಾಯಿತು.
ತಾಯಿ ಪಾರ್ವತಿ ಹಳದಿ ಬಣ್ಣದ ಉಡುಗೆಯಲ್ಲಿ ಸೌಮ್ಯ ಮೂರ್ತಿಯಾಗಿ ಅಲಂಕೃತಗೊಂಡು ಎಲ್ಲರನ್ನೂ ಆಶೀರ್ವದಿಸುತ್ತಿದ್ದಾಳೆ.
ಕಾಳರಾತ್ರಿ ಅಮ್ಮನ ಅಲಂಕಾರದಲ್ಲಿ ರುದ್ರ ಸ್ವರೂಪಿಣಿಯಾಗಿದ್ದ ದೇವಿ ಪಾರ್ವತಿ ನಿನ್ನೆ ಮಹಾಗೌರಿ ಅವತಾರ ತಾಳಿ ಸೌಮ್ಯಮೂರ್ತಿಯಾದಳು.
ತಾಯಿ ಪಾರ್ವತಿ ದೇವಿಯನ್ನು ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನ್ ಅವರು ಮಹಾಗೌರಿ ಅವತಾರದಲ್ಲಿ ಸಿಂಗರಿಸಿ,ಮಹಾಪೂಜೆ ನೆರವೇರಿಸಿದರು.
ವಿವಿಧ ಹೂಗಳು,ಬೆಳ್ಳಿ ಕೈಕಾಲುಗಳನ್ನು ಧರಿಸಿ ವಿಶೇಷವಾಗಿ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ಮಾಡಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
