ಮೈಸೂರು: ಆರ್ಟಿಐ ಮಾಹಿತಿ ಪತ್ರಿಕೆಯನ್ನು
ಶಾಸಕ ಜಿ.ಟಿ.ದೇವೇಗೌಡರು ಹಾಗೂ ಅವರ ಪತ್ನಿ ಲಲಿತಾ ಜಿ.ಟಿ. ದೇವೇಗೌಡ ಅವರು ಬಿಡುಗಡೆ ಮಾಡಿದರು.
ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದಜಿ.ಟಿ. ದೇವೇಗೌಡರು, ಪತ್ರಿಕೆಯನ್ನು ದೇಶದ ಹಿತದೃಷ್ಟಿಯಿಂದ ಸದುಪಯೋಗ ಪಡಿಸಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಅವರ ಸಮಾಜಮುಖಿ ಕಾರ್ಯಗಳನ್ನು ಜನರಿಗೆ ಪರಿಚಯಿಸುವ ಕಾರ್ಯವನ್ನು ಪತ್ರಿಕೆ ಮಾಡಬೇಕು. ಪತ್ರಿಕೆಯು ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಲಲಿತಾ ಜಿ.ಟಿ. ದೇವೇಗೌಡ ಅವರು ಮಾತನಾಡಿ, ಆರ್ಟಿಐ ಮಾಹಿತಿ ಪತ್ರಿಕೆಯು ಯಾವುದೇ ಅಡಚಣೆಗಳಿಲ್ಲದೆ ಸುಸೂತ್ರವಾಗಿ ಮುಂದುವರಿಯಲಿ. ಸಮಾಜದಲ್ಲಿ ನಡೆಯುತ್ತಿರುವ ಉತ್ತಮ ಕೆಲಸಗಳು ಹಾಗೂ ಜನಪರ ಸೇವೆಗಳ ಕುರಿತು ಪತ್ರಿಕೆಯಲ್ಲಿ ಪ್ರಕಟಣೆಗಳು ಮೂಡಿಬರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಆರ್ಟಿಐ ಮಾಹಿತಿ ಪತ್ರಿಕೆಯ ಸಹ ಸಂಪಾದಕರಾದ ಯಾದವ್ ಹರೀಶ್, ಏಳು ಜಿಲ್ಲೆಗಳ ಮುಖ್ಯಸ್ಥರಾದ ರಕ್ತದಾನಿ ಮಂಜು, ಮೈಸೂರು ಜಿಲ್ಲಾ ವರದಿಗಾರರಾದ ಝಾನ್ಸಿ ರಾಣಿ, ಟಿ. ನರಸೀಪುರ ವರದಿಗಾರರಾದ ಮಂಜುಳಾ, ಪತ್ರಿಕೆಯ ಸಲಹೆಗಾರರಾದ ಸತೀಶ್ ಹಾಗೂ PGRSS ಸಂಸ್ಥೆಯ ಖಜಾಂಚಿ ಮಂಜುಳಾ ಭಾಗವಹಿಸಿದ್ದರು.
