ಹುಣಸೂರು: ಹಣಸೂರು
ನಗರ ಸಭೆಗೆ ಸೇರಿದ ಸರ್ಕಾರಿ ಉದ್ಯಾನವನದ ಜಾಗವನ್ನು ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ಗಂಭೀರ ಆರೋಪ ಮಾಡಿದ್ದಾರೆ.
ಹುಣಸೂರು ನಗರ ಸಭೆಗೆ ಸೇರಿದ ಬ್ರಾಹ್ಮಣರ ಬೀದಿಯ ನಗರಸಭಾ ಖಾತ ನಂಬರ್ 47/29ರ ಸಂಖ್ಯೆಯ ಸ್ವತ್ತಿನ ಪಶ್ಚಿಮ ದಿಕ್ಕಿಗೆ ನಗರಸಭೆ ರಸ್ತೆ ಇದೆ, ಈ ನಗರ ಸಭೆಯ ಜಾಗ ಮತ್ತು 5 ಅಡಿ ಗಲ್ಲಿಯ ಜಾಗವನ್ನು ಮಧು ಎಂಬ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ಇದು ಸರ್ಕಾರಿ ಪಾರ್ಕ್ ಜಾಗವಾಗಿದ್ದು ಈ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ಸ್ಥಳೀಯರು ನಮ್ಮ ಪ್ರಜಾ ಪಾರ್ಟಿಗೆ ದೂರು ಸಲ್ಲಿಸಿದ್ದರ ಮೇರೆಗೆ ಪರಿಶೀಲಿಸಲಾಗಿ ಅದು ನಿಜವೆಂದು ಗೊತ್ತಾಗಿದೆ.
ಈ ರಸ್ತೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ತಿರುಗಾಡುತ್ತಾರೆ, ಇದೇ ಸರ್ಕಾರಿ ಪಾರ್ಕ್ ಜಾಗವನ್ನು ಮಧು ಎಂಬವರು ಒತ್ತುವರಿ ಮಾಡಿಕೊಂಡು ಖಾತೆ ಮಾಡಿಸಿಕೊಳ್ಳಲು ಹೊರಟಿದ್ದಾರೆ ಎಂದು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಚೆಲುವರಾಜು ಅವರು ತಿಳಿಸಿದ್ದಾರೆ.
ನಗರಸಭಾ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸರ್ಕಾರಿ ಸ್ವತ್ತಾದ ಪಾರ್ಕ್ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಮಾಡಬಾರದೆಂದು ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ಖಾತೆ ಮಾಡಿದ್ದು ಕಂಡುಬಂದಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿರುವ ಬಗ್ಗೆ ನಗರಸಭಾ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಚೆಲುವರಾಜು ಎಚ್ಚರಿಸಿದ್ದಾರೆ.
