
ಮೈಸೂರು: ಐಶಾರಾಮಿ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಮೂವರು ಕತರ್ನಾಕ್ ಖದೀಮರನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾಹಿತಿ ನೀಡಿದರು.
ಮೈಸೂರಿನ ಗೌಸಿಯಾನಗರದ ರುಮಾನ್ ಷರೀಪ್(26),ರಾಜೀವ್ ನಗರದ ಮುಜಾಹಿದ್ ಪಾಶ(37),ಲಷ್ಕರ್ ಮೊಹಲ್ಲಾದ ಷಾಹಬುದ್ದೀನ್(25) ಬಂಧಿತ ಆರೋಪಿಗಳು.
ನಗರದ ಸಿ.ಎಸ್.ಅಭಿಷೇಕ್ ಎಂಬುವವರು ಬನ್ನೂರು ಪೊಲೀಸ್ ಠಾಣೆಗೆ ದೂರು ನೀಡಿ, ಮೈಸೂರಿನ ರುಮಾನ್ ಷರೀಫ್ ಎಂಬುವರು ಫೇಸ್ಬುಕ್ ಮೂಲಕ ಪರಿಚಯವಾಗಿ ತನ್ನ ಬಳಿ ಇರುವ ಐಷಾರಾಮಿ ಕಾರುಗಳನ್ನು ಕಡಿಮೆ ಬೆಲೆಗೆ ಕೊಡುತ್ತೇನೆಂದು ಹೇಳಿ ನಂಬಿಸಿ ಮುಜಾಹಿದ್ ಪಾಷಾ ಹಾಗೂ ಶಾಹುಬುದ್ದಿನ್ ಅವರೊಂದಿಗೆ ಸೇರಿಕೊಂಡು
HR-24-BA-5991 8 0 25 ಹಾಗೂ
KA-19ME-4591 ನಂಬರಿನ ಪೋಲೋ 1.2ಎಂಬ 2 ಕಾರುಗಳನ್ನು ನೀಡಿ
5,50,000 ರೂ ಪಡೆದು ಯಾವುದೇ ದಾಖಲಾತಿಗಳನ್ನು ನೀಡದೆ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ
ಮಾ.18 ರಂದು ಬನ್ನೂರಿನ ರಂಗಸಮುದ್ರ ಗೇಟ್ ಹತ್ತಿರ ನಿಂತಿದ್ದ ಆ ವ್ಯಕ್ತಿಗಳನ್ನು ನೋಡಿ ತನಗೆ ಮಾರಾಟ ಮಾಡಿದ ಕಾರುಗಳ ದಾಖಲಾತಿಗಳನ್ನು ನೀಡುವಂತೆ ಒತ್ತಾಯಿಸಿದಾಗ ಗಲಾಟೆ ಮಾಡಿ ಧಮ್ಕಿ ಹಾಕಿದರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಅಭಿಷೇಕ್ ಅವರು ನೀಡಿದ ದೂರಿನ ಮೇರೆಗೆ ಬನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ರುಮಾನ್ ಷರೀಪ್, ಮುಜಾಹಿದ್ ಪಾಶ, ಷಾಹಬುದ್ದೀನ್ ಅವರುಗಳು ಕಾರಿನ ಮೂಲ ಆರ್.ಸಿ ಮಾಲೀಕರ ಬಳಿ ಕಾರು ಖರೀದಿಸುವುದಾಗಿ ನಂಬಿಸಿ ಕಾರಿನ ಮಾಲೀಕರಿಗೆ ಸ್ವಲ್ಪ ಪ್ರಮಾಣದ ಹಣ ನೀಡಿ ನಂತರ ಉಳಿದ ಹಣವನ್ನು ದಾಖಲಾತಿಗಳನ್ನು ಪಡೆಯುವಾಗ ನೀಡುವುದಾಗಿ ಹೇಳಿ,ಮಾಲೀಕರನ್ನ ನಂಬಿಸಿ ಕಾರನ್ನು ತೆಗೆದುಕೊಂಡು ಬಂದು ನಂತರ ಅದೇ ಕಾರನ್ನು ಬೇರೆಯವರಿಗೆ ಅಧಿಕ ಹಣಕ್ಕೆ ಮಾರಾಟ ಮಾಡಿ ಹೆಚ್ಚು ಹಣ ಪಡೆದು ಕಾರಿನ ದಾಖಲಾತಿಗಳನ್ನು ಒಂದೆರಡು ದಿನದಲ್ಲಿ ಕೊಡುವುದಾಗಿ ನಂಬಿಸಿ ನಂತರ ಆರ್.ಸಿ ಮಾಲೀಕರಿಗೂ ಹಣ ನೀಡದೆ ಇತ್ತ ಕಾರುಗಳನ್ನು ಖರೀದಿ ಮಾಡಿದವರಿಗೂ ವಾಹನದ ದಾಖಲಾತಿಗಳನ್ನು ನೀಡದೇ ವಂಚನೆ ಮಾಡಿ ಹಲವಾರು ಕಾರುಗಳನ್ನು ಮಾರಾಟ ಮಾಡಿದ್ದಾರೆ.
ಈ ಮೂಲಕ ಕೋಟ್ಯಂತರ ಹಣ ವಂಚಿಸಿದ್ದಾರೆ.
ಮೇಲ್ಕಂಡ ಆರೋಪಿಗಳಿಂದ ಸುಮಾರು ಒಂದು ಕೋ ಹತ್ತು ಲಕ್ಷ ರೂ ಬೆಲೆ ಬಾಳುವ ಈ ಕೆಳಕಂಡ 8 ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
HR.26.DA.5991. Audi A5 Car,
Κ.Α.19.ΜΕ.4591. Polo 1.2.Car, K.A.50.N.0577 Cheverolet Cruze Car,
K.A.06.MV.8903 Ford Eco Sport Car,
ΚΑ.04.ML.1918. Hyundai 120. Asta Car,
DL.2.CQ.1883. Audi AC A4 Car,
Κ.Α.06.Ν.7973. Volkswagen Vento.Car
KA.18.P.0829 Volkswagen Polo 1.2 ಕಾರ್ ಗಳನ್ನು ಅಮಾನತು ಪಡಿಸಿಕೊಳ್ಳಲಾಗಿದೆ.
ಅಪರ ಪೊಲೀಸ್ ಅಧೀಕ್ಷಕರಾದ
ಎಲ್.ನಾಗೇಶ್ ರವರ ನೇತೃತ್ವದಲ್ಲಿ ಡಿ ಎಸ್ ಪಿ ರಘು.ಜಿ.ಎಸ್, ಬನ್ನೂರು ಪೊಲೀಸ್ ಠಾಣೆಯ ಪಿ.ಐ ಸತೀಶ್, ಪಿ.ಎಸ್.ಐ ಸುದರ್ಶನ್, ಎಎಸ್ಐ ಸತೀಶ್ ಮತ್ತು ಸಿಬ್ಬಂದಿಗಳಾದ ಅಬ್ದುಲ್ ಲತೀಫ್, ಎನ್.ಎ.ಅಶೋಕ,ಭಾಸ್ಕರ್ ಅವರುಗಳು ಈ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮಾಲು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.
ی
