ಮೈಸೂರು: ದಸರಾ ಮಹೋತ್ಸವ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ಶೈಲ ಪುತ್ರಿ ಅಲಂಕಾರ ಮಾಡಿ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿಸಲಾಯಿತು.
ತಾಯಿ ಪಾರ್ವತಿಗೆ ಅರಿಶಿಣ ಮತ್ತು ವಿವಿಧ ಆಭರಣಗಳಿಂದ ಅಲಂಕರಿಸಲಾಗಿತ್ತು, ಬೆಳ್ಳಿ ಕೈಗಳು ಕಿರೀಟ ತೊಡಿಸಿ ಕೈಯಲ್ಲಿ ತ್ರಿಶೂಲಧಾರಿಯಾಗಿ ಅಮ್ಮ ಕಂಗಳಿಸುತ್ತಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ಶೈಲ ಪುತ್ರಿ ಅಲಂಕಾರದಲ್ಲಿ ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನವರು ಅಲಂಕರಿಸಿದರು.
ಬಳೆ ಮತ್ತು ವಿವಿಧ ಹೂಗಳಿಂದ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಿದರು. ಸುತ್ತಮುತ್ತಲಿನ ಭಕ್ತಾದಿಗಳು ಆಗಮಿಸಿ ತಾಯಿಯನ್ನು ಕಣ್ತುಂಬಿ ಕೊಂಡರು
