ಮೈಸೂರು: ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ,ಒಂದು ವಾರದ ಅಂತರದಲ್ಲಿ ಮೈಸೂರಿನಲ್ಲಿ ನಾಲ್ಕನೇ ಕೊಲೆ ನಡೆದಿದ್ದು ಜನತೆ ಆತಂಕಕ್ಕೆ ಒಳಗಾಗಿ ದ್ದಾರೆ.
ನಿನ್ನೆ ರಾತ್ರಿ ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಫ್ರಿದಿ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತ ಅಫ್ರಿದಿ ಮೂಲತಃ ಮೈಸೂರಿನ ಸುಣ್ಣದಕೇರಿ ನಿವಾಸಿ.
ಯುವತಿಯೊಂದಿಗಿನ ಪ್ರೇಮ ವಿಚಾರಕ್ಕೆ ಈ ಕೊಲೆ ನಡೆದಿದೆ. ಯುವತಿಯ ಅಣ್ಣನೇ ತಂಗಿಯ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿ, ಅಫ್ರಿದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.
ಸ್ಥಳಕ್ಕೆ ಎನ್.ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
