ಮೈಸೂರು: ರಾಮಾನುಜರ ತತ್ವಾದರ್ಶಗಳು ಎಲ್ಲೆಲ್ಲಿ ನೆಲೆಸಿರುವುದೋ ಅಲ್ಲೆಲ್ಲಾ ಸಮಾನತೆ, ಸಹೋದರತ್ವ ನೆಲೆಸುತ್ತದೆ ಎಂದು ಮೇಲು ಕೋಟೆಯ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ತಿಳಿಸಿದರು.
ಮೈಸೂರಿನ ಜಯಲಕ್ಷ್ಮೀಪುರಂ ನಲ್ಲಿರುವ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಕಾಳಿದಾಸ ರಸ್ತೆಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಪಂಚ ಗರುಡೋತ್ಸವ ಸೇವಾ ಸಮಿತಿ,ರಾಮಾನುಜ ವೇದಿಕೆ ಗರುಡ ಸಭಾ ಸಹಯೋಗದೊಂದಿಗೆ ತೃತೀಯ ಬಾರಿಗೆ ಆಯೋಜಿಸಿದ್ದ ದ್ವಾದಶ(12) ಗರುಡೋತ್ಸವ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು
ಮಾತನಾಡಿದರು.
ದೈವಿಕ ಪರಂಪರೆಯನ್ನು ಆಚರಣೆಯಾಗಿ ರೂಪಿಸುವ ಕ್ರಿಯೆಯೇ ಗರುಡೋತ್ಸವ ಎಂದು ಹೇಳಿದರು.
ದ್ವಾದಶ ಗರುಡೋತ್ಸವ ವೈಷ್ಣವ ಪರಂಪರೆ ಪ್ರತಿ ಬಿಂಬಿಸುತ್ತದೆ. ಶ್ರೀರಂಗಂ, ತಿರುಪತಿ, ಕಾಂಚಿಪುರಂ, ಮೇಲುಕೋಟೆ ದಿವ್ಯ ಕ್ಷೇತ್ರಗಳ ಗರುಡೋತ್ಸವದ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪ್ರತಿಷ್ಠಾಪಿಸ ಲಾಗಿರುವ ಧಾರ್ಮಿಕ ಉತ್ಸವ ಇದಾಗಿದೆ.
ರಾಮಾನುಜರ ತತ್ವ, ಆದರ್ಶ ಸರ್ವಕಾಲಿಕ,ಮುಂಬರುವ 2027ರ ಫೆ.6ರಂದು ಮೈಸೂರಿನ ಅರಮನೆ ಮುಂಭಾಗ ಹದಿನೆಂಟು ಗರುಡೋತ್ಸವ ಆಚರಿಸಲಾಗುವುದು ಗರುಡ ಕೇವಲ ಭಗವಂತನ ವಾಹನ ಮಾತ್ರವಲ್ಲ, ಅದೊಂದು ಭಗವಂತನ ಸೇವೆಯ ಸಂಕೇತ ಎಂದು ಹೇಳಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮದ ಕಿರಿಯ ಶ್ರೀಗಳಾದ ದತ್ತ ವಿಜಯೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಉನ್ನತ ಭಕ್ತಿಯಿಂದ ದೇವರೆಡೆಗೆ ಕರೆದುಕೊಂಡು ಹೋಗುವ ಉತ್ಸವ ಇದಾಗಿದೆ. ಗರುಡೋತ್ಸವ ಭಕ್ತಿಯಡೆಗೆ ದಾರಿ ಯಾಗಿದೆ. ಹರಿಭಕ್ತಿ ಇಲ್ಲದಿದ್ದಲ್ಲಿ ಏನಿದ್ದರೂ ಶೂನ್ಯ. ಅಂತೆಯೇ ಹರಿಭಕ್ತಿ ಉಂಟು ಮಾಡುವ ಮಹೋತ್ಸವ ನಡೆಯುತ್ತಿರುವುದು ಪುಣ್ಯದ ಕೆಲಸ ಎಂದು ತಿಳಿಸಿದರು.
ಹೈದರಬಾದ್ ಶಂಷಾಬಾದ್ನ ಚಿನ್ನ ಜೀಯರ್ ಸ್ವಾಮಿ ಆಶ್ರಮದ ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ
ರಾಮಾನುಜ ಚಿನ್ನ ಜೀಯರ ಸ್ವಾಮೀಜಿ ಮಾತನಾಡಿ, ದೇವರ ಸ್ಮರಣೆಯಿಂದ ಭೂಲೋಕವನ್ನು ವೈಕುಂಠ ವಾಗಿಸಬಹುದು. ಗರುಡ ಅಂದರೆ ವೇದ ಗರುಡೋ ತ್ಸವದಲ್ಲಿನ ದಿವ್ಯ ನಾದ, ವೇದಮಂತ್ರಗಳ ಘೋಷ, ಇಂತಹ ಉತ್ಸವಗಳು ಸರ್ವರಲ್ಲಿಯೂ ಜಾತ್ಯತೀತತೆ ಮೂಡಿಸಿ, ಸೌಹಾರ್ದತೆ ಬೆಳೆಸುತ್ತದೆ,ಧರ್ಮದ ಉಳಿವಿಗೆ ಉತ್ಸವ ಅಗತ್ಯವಿದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಗಳ ಆದೇಶ ಹಾಗೂ ಮಾರ್ಗದರ್ಶನ
ದಂತೆ ಗರಡೋತ್ಸವ ಆರಂಭವಾಗಿದೆ. 2024ರಲ್ಲಿ ಪಂಚಗರುಡೋತ್ಸವ, 2025ರಲ್ಲಿ ಷಷ್ಠಿ ಗರುಡೋತ್ಸವ
ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡಲಾಗಿದೆ.ಈಗ
2026ರಲ್ಲಿ ದ್ವಾದಶ ಉತ್ಸವ ಜರುಗಿದೆ ಎಂದು ಹೇಳಿದರು.
ಈ ವೇಳೆ ಸುದರ್ಶನ ನರಸಿಂಹ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಭಾಷ್ಯಂ ಸ್ವಾಮೀಜಿ, ಪ್ರಮತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯರಾದ ಭಾಗ್ಯ ಮಾದೇಶ್, ನಮ್ರತಾ ಸುರೇಶ್, ಪಂಚಗರುಡೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಲಕ್ಷ್ಮೀಶ್, ಅರ್ಚಕರಾದ ಕಶ್ಯಪ್, ಮುರಳಿ, ಆನಂದ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್.ಯೋಗಾನರಸಿಂಹನ್, ಎಸ್.ಸುದರ್ಶನ್, ಪಿ.ರಾಮಾನುಜಂ, ಮಣಿವಣ್ಣನ್, ಶ್ರೀರಂಗರಾಜನ್ ಉತ್ತಮನಂಬಿ, ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್, ಪದ್ಮಶ್ರೀ, ಜಿ.ಕೆ.ಕಮಲ, ಎಂ.ಆರ್.ನಾಗಮಣಿ, ಜಾನಕಿ ಕೃಷ್ಣಮೂರ್ತಿ, ವೀರರಾಘವನ್, ರಾಮಪ್ರಿಯನ್, ವೈಯ್ಯಾಕರಣಿ ರಾಮಾನುಜಂ,
ರಂಗರಾಜು, ಶ್ರೀನಿಧಿ ಶಾಂತಾರಾಂ, ಎಂ.ಆನಂದ್, ಜೆ.ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಟಿ.ಎಸ್ ಅರುಣ್ ಹಾಜರಿದ್ದರು.
ಇದೇ ವೇಳೆ ಶಾಸಕ ಕೆ.ಹರೀಶಗೌಡರು ಪಂಚ ಗರುಡೋತ್ಸವದಲ್ಲಿ ಭಾಗವಹಿಸಿ ಯತಿಗಳ ಆಶೀರ್ವಾದ ಪಡೆದರು.
