ಮೈಸೂರು: ಪ್ರತಾಪ್ ಸಿಂಹ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಮೈಸೂರಿನ ರಾಮಾವಿಲಾಸ ರಸ್ತೆಯಲ್ಲಿ
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 83 ನೇ ಜಯಂತೋತ್ಸವ
ಆಚರಿಸಲಾಯಿತು.
ಜನುಮದಿನ ದಿನಾಚರಣೆಯ ಸ್ಮರಣೆಯ ಕಾರ್ಯಕ್ರಮ ಪ್ರಯುಕ್ತ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಸಿಹಿ ಮತ್ತು ಮಜ್ಜಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಕೆ ದಿನೇಶ್, ಸಮಾಜದ ಹಿರಿಯ ಮುಖಂಡರಾದ ನಾಗರಾಜ್, ಶಿವಣ್ಣ, ಮಹೇಶ್, ಬೊ ಉಮೇಶ್, ಒಕ್ಕಲಿಗರ ಸಂಘದ ಗಿರೀಶ್ ಗೌಡ, ನಿರ್ದೇಶಕರಾದ ಚೇತನ್ ಗೌಡ, ಎಂ ಎನ್ ರಾಜು, ಕಾರ್ಯಕ್ರಮದ ಆಯೋಜಕ ಆರ್ ಪರಮೇಶ್ ಗೌಡ, ಸಂದೇಶ್, ಉಮೇಶ್, ಬೆಳಕು ಮಂಜು, ನಜರ್ಬಾದ್ ಅಭಿ, ಕಿರಣ್, ಚಂದನ್ ಗೌಡ ಮತ್ತಿತರರು ಹಾಜರಿದ್ದರು.
