ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ವತಿಯಿಂದ ನಗರದ ಪಿಕೆ ಟ್ರಾಮಾ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡುವ ಮೂಲಕ ಮಾನವೀಯ ಸೇವಾ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ನ ಸದಸ್ಯರು ಆಸ್ಪತ್ರೆಯ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಬಳಿಕ ರೋಗಿಗಳಿಗೆ ತಾಜಾ ಹಣ್ಣು-ಹಂಪಲುಗಳನ್ನು ವಿತರಿಸಿ ದೈರ್ಯದಿಂದ ಇರುವಂತೆ ಆತ್ಮಸ್ಥೈರ್ಯ ತುಂಬಿದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಲಯನ್ ಎಚ್ ಕೆ ಪ್ರಸನ್ನ ಮಾತನಾಡಿ,ಸಮಾಜದ ದುರ್ಬಲ ವರ್ಗದ ಜನರಿಗೆ ಸೇವೆ ಸಲ್ಲಿಸುವುದು ಲಯನ್ಸ್ ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು, ಆರೋಗ್ಯ, ಶಿಕ್ಷಣ, ಪರಿಸರ ಹಾಗೂ ಮಾನವೀಯ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸೇವಾ ಕಾರ್ಯದ ಪ್ರಾಯೋಜಕತ್ವವನ್ನು ಸಂಸ್ಥೆಯ ಸದಸ್ಯರಾದ ಕೆ.ಆರ್ ಭಾಸ್ಕರ್ ನಂದ ಮತ್ತು ಅಮರ ಭವಾನಿ ದಂಪತಿಗಳು ವಹಿಸಿದ್ದರು.ಅವರ ಸೇವೆಯನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಲಯನ್ಸ್ ಕ್ಲಬ್ನ ಈ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ, ರೋಗಿಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಈ ಸೇವಾ ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ 317 ಜಿ ಯ ಜಿಎಲ್ ಟಿ ಕೋಆರಡಿನೇಟರ್ ಲಯನ್ ಎಲ್.ಶ್ರೀನಿವಾಸ್, ಪ್ರಾಂತೀಯ ಅಧ್ಯಕ್ಷರಾದ ಲಯನ್ ಜ್ಯೋತಿ ಮಂಜುನಾಥ್, ವಲಯ ಅಧ್ಯಕ್ಷ ಶಿವಾಜಿ ರಾವ್, ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಆರ್. ದಿನೇಶ್, ಡಾಕ್ಟರ್ ಜಿ ಕಿಶೋರ್ ಪಿ ಮಲ್ಲಿಕಾರ್ಜುನಪ್ಪ ,ವಿ ಶ್ರೀಧರ್, ಕೆ.ಟಿ. ವಿಷ್ಣು, ಯಶೋದಮ್ಮ ಮತ್ತು ಸದಸ್ಯರು ಹಾಜರಿದ್ದರು.
