ಮೈಸೂರು: ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಹಾಗೂ ಲಯನ್ ಕ್ಲಬ್ ಆಫ್ ಮೈಸೂರು ಎಲೈಟ್ ವತಿಯಿಂದ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣ ಶಿಬಿರ ಹಮ್ಮಿಕೊಳ್ಳಲಾಯಿತು.
ಪಂಚಾಯತ್ ಗ್ರಾಮಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ, ಪಿಜಿ ಆರ್ ಎಸ್ ಎಸ್ ನಿರಾಶ್ರಿತರ ಮತ್ತು ವೃದ್ಧರ ಬೃಂದಾವನ ಹಾಗೂ ನಾರಾಯಣ ಹೃದಯ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಲಯನ್ ಕ್ಲಬ್ ಆಫ್ ಮೈಸೂರು ಎಲೈಟ್, ಪಂಚಾಯತ್ ವಾರ್ತೆ ಪತ್ರಿಕೆ ಹಾಗೂ ಇಲವಾಲ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಪಂಚಾಯಿತಿ ಎದುರುಗಡೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನ ವನ್ನು ಹಲವಾರು ಮಂದಿ ಪಡೆದುಕೊಂಡರು.
ಶಿಬಿರವನ್ನು ಇಲವಾಲ ಗ್ರಾಮ ಪಂಚಾಯಿತಿಯ ಪಿಡಿಒ ಹೇಮಂತ್ ಮತ್ತು ಕಾರ್ಯದರ್ಶಿ ಕುಮಾರ್ ಅವರು ಉದ್ಘಾಟನೆ ಮಾಡಿದರು.
ಲಯನ್ಸ್ ಕ್ಲಬ್ ತಂಡದ ವತಿಯಿಂದ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಗ್ರಾಮೀಣ ಅಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷ ಯಾದವ್ ಹರೀಶ್, ಸಹ ಕಾರ್ಯದರ್ಶಿ ಅಶ್ವಿನಿ, ಖಜಾಂಚಿ ಮಂಜುಳಾ, ರಾಜ್ಯ ಸಂಚಾಲಕ ರಕ್ತದಾನಿ ಮಂಜು, ಕಂಪ್ಯೂಟರ್ ಆಪರೇಟರ್ ಹರಣಿ, ಹರ್ಷ,ಲಯನ್ ಚಂದ್ರಶೇಖರ, ಲಯನ್ ಸುನಿತಾ ಚಂದ್ರಶೇಖರ್,ಲಯನ್ ಹೇಮತ್ ಕುಮಾರ್,ಲಯನ್ ಸುರೇಶ ಬಿ.ಕೆ.,
ಲಯನ್ ಮೇಠಿ,
ಲಯನ್ ಅಪ್ಸರ ಮೇಠಿ ಹಾಜರಿದ್ದರು.
500ಕ್ಕೂ ಹೆಚ್ಚು ಮಂದಿ ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
