ಮೈಸೂರು: ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಮೈಸೂರಿನ ಅರಮನೆ ವರಹಾ ಗೇಟ್, ದಕ್ಷಿಣ ದ್ವಾರದ ಮುಂಭಾಗ ದಲ್ಲಿ ವಿಶೇಷವಾಗಿ ಆಚರಿಸಲಾಯಿತು.
ನಮ್ಮ ನಾಡು ಕಂಡ ಶ್ರೇಷ್ಠ ಅರಸರು, ಯದುವಂಶದ ಕುಲತಿಲಕ, ಮೈಸೂರು ವಿಶ್ವವಿದ್ಯಾಲಯದ ರೂವಾರಿ, ಏಷ್ಯಾದ ಮೊದಲ ಶಿವನ ಸಮುದ್ರ ವಿದ್ಯುತ್ ಸ್ಥಾವರದ ರೂವಾರಿ, ಕನ್ನಂಬಾಡಿ ಕಟ್ಟೆ ನಿರ್ಮಾತ, ಹಿಂದುಳಿದ ವರ್ಗದ ಜನರಿಗೆ, ದಲಿತರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಅಂಗವಾಗಿ ದಕ್ಷಿಣ ದ್ವಾರದ ಮುಂಭಾಗ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರ ಇಟ್ಟು ಪೂಜಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ ಅವರು ನಾಲ್ವಡಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ನಾಲ್ವಡಿ ರವರು ಈ ದೇಶ ಕಂಡ ಮಹಾನ್ ಮಹಾರಾಜ, ಪ್ರಾತಃ ಸ್ಮರಣೀಯರು ಎಂದು ಬಣ್ಣಿಸಿದರು.
ಅಭಿವೃದ್ಧಿಯ ಹರಿಕಾರ, ಕನ್ನಂಬಾಡಿ ಕಟ್ಟೆ, ಮೈಸೂರು ವಿಶ್ವವಿದ್ಯಾಲಯ ಹಾಗೂ ಶಿವನ ಸಮುದ್ರ ಜುಲೈ ವಿದ್ಯುತ್ ಗಾರ ಸೇರಿದಂತೆ ಹಲವಾರು ಹೊಸ ನೂತನ ಯೋಜನೆಗಳನ್ನು ಜಾರಿಗೆ ತಂದರು. ಜತೆಗೆ ಪ್ರಜೆಗಳ ಹಿತರಕ್ಷಣೆಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಇವರು ರಾಜ್ಯವನ್ನು ವಿಸ್ತರಿಸದೆ, ಅಭಿವೃದ್ಧಿ ಕೆಲಸಗಳನ್ನು ಮಾಡಿ ಶಾಶ್ವತವಾಗಿ ಪ್ರಜೆಗಳ ಮನದಲಿ ಉಳಿದರು. ರಾಜ್ಯ ಸರ್ಕಾರ ಇಂತಹ ಮಹನೀಯರ ಜಯಂತಿ ಕಾರ್ಯಕ್ರಮವನ್ನು ಈಗಿನ ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅರಮನೆಗೆ ಆಗಮಿಸುವ ಪ್ರವಾಸಿಗರಿಗೆ ಎಪಿಎನ್ ಪ್ರಾಪರ್ಟೀಸ್ ಅಧ್ಯಕ್ಷ ಎ ಪಿ ನಾಗೇಶ್ ಅವರು ಮೈಸೂರು ಪಾಕ್ ವಿತರಿಸಿದರು.
ಹಿರಿಯ ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ ಅವರು ಮಾತನಾಡಿದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ ರಾಜ್ಯ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು, ಹಾಗೂ ಕೇಂದ್ರ ಸರ್ಕಾರ ನಾಲ್ವಡಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.
ಮುಖ್ಯ ಅತಿಥಿಗಳಾಗಿ ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಜೆಡಿಎಸ್ ನಗರಾಧ್ಯಕ್ಷ ಎಸ್ ಬಿ ಎಂ ಮಂಜು, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ ಬಿ ಲಿಂಗರಾಜು, ಸಮಾಜ ಸೇವಕ ದೊರೆಸ್ವಾಮಿ ಎಂಎನ್, ಮಹಾತ್ಮ ಗಾಂಧಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ
ಟಿ ಜಿ ಆದಿಶೇಷ ಗೌಡ,
ಗೋಲ್ಡನ್ ಸುರೇಶ್, ನಾಗೇಗೌಡ, ಕುಮಾರ್ ಗೌಡ, ಕೃಷ್ಣಪ್ಪ, ಪ್ರಭುಶಂಕರ, ಎಳನೀರು ರಾಮಣ್ಣ, ಸಿಂದುವಳ್ಳಿ ಶಿವಕುಮಾರ್, ನೇಹಾ, ಶೋಭಾರಾಣಿ ಗೌಡ, ಸುಜಾತಾ, ಸೌಮ್ಯ, ಇಂದಿರಾ, ಪದ್ಮಾ, ಪ್ರಭಾಕರ್, ಶಿವರಾಂ, ವಿಜಯೇಂದ್ರ, ರಾಧಾಕೃಷ್ಣ, ದರ್ಶನ್ ಗೌಡ, ಪ್ರದೀಪ್, ಗಣೇಶ್ ಪ್ರಸಾದ್, ವಿಷ್ಣು, ರವೀಶ್, ರವಿ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
