ಮೈಸೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ಹಿರಿಯ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಗೆ ಆದೇಶ ಹೊರಡಿಸಿದ್ದು,
ಇದರಲ್ಲಿ ಮೈಸೂರು ಮಹಾನಗರ ಪಾಲಿಕೆ ಕೂಡಾ ಸೇರಿದೆ.
ಸರ್ಕಾರದ ಆದೇಶದಂತೆ, ಎಂ.ಕೆ. ಸವಿತಾ, ಕೆಎಸ್ (ಆಯ್ಕೆ ಶ್ರೇಣಿ) ಅವರನ್ನು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಅಧಿಕಾರಿಗಳು ತಕ್ಷಣದಿಂದಲೇ ಹೊಸ ಹುದ್ದೆಗೆ ಹಾಜರಾಗಿ ಕರ್ತವ್ಯ ವಹಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.
