ಟೆಹ್ರಾನ್: ಇರಾನ್ ನೌಕಾಪಡೆ ಅಮೆರಿಕದ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನ ವಾಹಕ ನೌಕೆಯನ್ನು ಹೊಡೆದುರುಳಿಸಿದೆ.
ಇರಾನ್ಗೆ 15 ಅಂಶಗಳ ಕದನ ವಿರಾಮದ ಕಂಡೀಷನ್ ಹಾಕುವ ಮೂಲಕ ಅಮೆರಿಕ 1 ತಿಂಗಳ ಅವಧಿಯ ಕದನ ವಿರಾಮವನ್ನು ಬಯಸುತ್ತಿದೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಒಂದು ಗಂಟೆಯ ಹಿಂದಷ್ಟೇ ಇರಾನ್ ನೌಕಾಪಡೆಯು ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿತ್ತು. ಯುಎಸ್ಎಸ್ ಅಬ್ರಹಾಂ ಲಿಂಕನ್ ನಿಕಟ ಕಣ್ಗಾವಲಿನಲ್ಲಿದೆ.
ಅದು ಇರಾನ್ ಪ್ರದೇಶವನ್ನು ಸಮೀಪಿಸಿದರೆ ನಾವು ಅದನ್ನು ಹೊಡೆದುರುಳಿಸುತ್ತೇವೆ ಎಂದು ಎಚ್ಚರಿಕೆ ನೀಡಿ, ಅದಾದ ಒಂದು ಗಂಟೆಯೊಳಗೇ ದಾಳಿ ನಡೆಸಿದೆ.
